ಶೃತಿ ಹರಿಹರನ್ ವಿಚಾರಕ್ಕಾಗಿ ನೆಟ್ಟಿಗರ ವಿರುದ್ದ ಸಿಟ್ಟಿಗೆದ್ದ ಒಳ್ಳೆ ಹುಡುಗ ಪ್ರಥಮ್..!!
ಚಂದನವನದ ಪ್ರತಿಭಾನ್ವಿತ ನಟಿಯಾಗಿರುವ ಶ್ರುತಿ ಹರಿಹರನ್ ಇದೀಗ ಮೊದಲ ನಿರೀಕ್ಷೆಯಲ್ಲಿದ್ದಾರೆ. ಗರ್ಭಿಣಿಯಾಗಿದ್ದು, ತಾಯಿಯಾಗುವ ಖುಷಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಂತಸವನ್ನು ಹಂಚಿಕೊಂಡಿದ್ದಾರೆ. ನಿನ್ನನ್ನು ನೋಡುವ ಕಾತುರ ನನಗೆ ತಾಳಲು ಆಗುತ್ತಿಲ್ಲ. ಹೊಸ ಪ್ರಯಾಣಕ್ಕೆ ನಿನಗೆ ಸ್ವಾಗತ. ನಿನ್ನನ್ನು ನೋಡಲು ನಾನು ಹಾಗೂ ನಿನ್ನ ತಂದೆ ಕಾತರರಾಗಿದ್ದೇವೆ ಎಂದು ಫೋಟೋ ಪೋಸ್ಟ್ ಮಾಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪವನ್ನು ಮಾಡಿದ್ದರು.. ಆ ಸಮಯದಲ್ಲಿಯೇ ಆಕೆಗೆ ಮದುವೆಯಾಗಿರುವ ವಿಷಯವು ಕೂಡ ಬೆಳಕಿಗೆ ಬಂದಿತ್ತು.. ಅಂದಿನಿಂದ ಚಿತ್ರರಂಗದಿಂದ ಸ್ವಲ್ಪ ದೂರವೇ ಉಳಿದಿದ್ಧಾರೆ..
ಪೋಸ್ಟ್ ಮಾಡಿದ ಪೋಟೋಗೆ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದರು.. ಕಮೆಂಟ್ ಮಾಡಿದವರಿಗೆ ಪ್ರಥಮ್ ಸಖತ್ತಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೆಟ್ಟಕೆಟ್ಟದಾಗಿ ಕಮೆಂಟ್ ಗಳು ಹರಿದು ಬರುತ್ತಿರುವುದನ್ನು ನೋಡಿ ನಟ ಪ್ರಥಮ್ ಸಿಟ್ಟಿಗೆದ್ದಿದ್ದಾರೆ.. . ನೆಟ್ಟಿಗರ ಕೆಳ ಮಟ್ಟದ ಕಮೆಂಟ್ ಗಳಿಗೆ ಪ್ರತಿಕ್ರಿಯೆ ನೀಡಿದ ಪ್ರಥಮ್ ಮುಖ್ಯವಾದ ವಿಷಯ ಸಾಮಾನ್ಯವಾಗಿ ನಾನು ಯಾರ ಪ್ರೊಫೈಲ್ ನಲ್ಲಿಯೂ ಕೂಡ ಕಮೆಂಟ್ ಮಾಡಲ್ಲ. ನಿಮಗೆ ಯಾರ ಮೇಲೆ ಎಷ್ಟೇ ವಿರೋಧ ಇದ್ದರೂ ನಿಮ್ಮ ಬಳಿ ಇಟ್ಕೊಳಿ, ಅದೆಲ್ಲ ನಿಮ್ಮಿಷ್ಟ.ಇನ್ನೂ ಹೊಟ್ಟೆಯಲ್ಲಿರೋ ಮಗುವಿನ ಬಗ್ಗೆ ಇಷ್ಟೆಲ್ಲಾ ವಿರೋಧವಾ? ಗುರು ಆ ಮಗುವಿನ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡೋಕೆ ನೀವೆಲ್ಲ ಯಾರಪ್ಪ ಎಂದು ಖಡಕ್ ಆಗಿಯೇ ಹೇಳಿದ್ದಾರೆ. ಮುಖ್ಯವಾದ ವಿಚಾರ ಅರ್ಜುನ್ ಸರ್ಜಾರಿಗೆ ಟ್ಯಾಗ್ ಮಾಡೋ ಚಿಲ್ಲರೆ ಬುದ್ಧಿ ಬಿಡಿಯನ್ನು ಬಿಡಿ ಎಂದಿದ್ದಾರೆ.. ಒಳ್ಳೆ ಹುಡುಗ ಪ್ರಥಮ್ ಈ ರೀತಿಯ ವಿಚಾರದಲ್ಲಿಯೇ ಎಲ್ಲರಿಗೂ ಇಷ್ಟವಾಗಿ ಬಿಡುತ್ತಾರೆ.
Comments