ನನ್ನ ರಾಜೀನಾಮೆ ಕೇವಲ ವದಂತಿ ಅಷ್ಟೇ..! ನಾನು ಇಲ್ಲೆ ಇರುತ್ತೇನೆ..!!! ಎಂದಿದ್ದು ಯಾರ್ ಗೊತ್ತಾ..?
ಕಳೆದ ಒಂದು ವಾರದಿಂದ ಅತೃಪ್ತ ಶಾಸಕರ ರಾಜೀನಾಮೆ ಜೋರಾಗಿಯೇ ನಡೆಯುತ್ತಿದೆ… ದೋಸ್ತಿ ಸರ್ಕಾರಕ್ಕೆ ಇದರಿಂದ ತಲೆನೋವು ಉಂಟಾಗಿದೆ.. ಅತೃಪ್ತ ಶಾಸಕರ ರಾಜೀನಾಮೆ ಪಟ್ಟಿಯಲ್ಲಿ ಶಾಸಕಿ ಸೌಮ್ಯ ರೆಡ್ಡಿ ಹೆಸರು ಕೂಡ ಕೇಳಿ ಬರುತ್ತಿತ್ತು.. ತಂದೆ ರಾಮಲಿಂಗಾ ರೆಡ್ಡಿ ರಾಜೀನಾಮೆಯಿಂದ ಸೌಮ್ಯ ರೆಡ್ಡಿ ಕೂಡ ರಾಜೀನಾಮೆ ಕೊಡುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಕೊನೆಗೂ ಈ ಎಲ್ಲ ಊಹಾಪೋಹಗಳಿಗೆ ಶಾಸಕಿ ಸೌಮ್ಯ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ..
ಸದ್ಯ ನಾನು ಕಾಂಗ್ರೆಸ್ಗೆ ರಾಜೀನಾಮೆ ಕೊಡುವ ಮಾತುಗಳನ್ನು ಆಡಿಲ್ಲ.. . ನನ್ನ ರಾಜೀನಾಮೆ ಕೇವಲ ವದಂತಿ ಎಂದು ಶಾಸಕಿ ಸೌಮ್ಯಾರೆಡ್ಡಿ ತಿಳಿಸಿದ್ದಾರೆ.. ಬೆಂಗಳೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಸೌಮ್ಯ ರೆಡ್ಡಿ ನಾನು ರಾಜೀನಾಮೆ ನೀಡುತ್ತೇನೆ ಎಂದು ಎಲ್ಲಿಯೂ ಕೂಡ ತಿಳಿಸಿಲ್ಲ… ಒಂದು ರೂಪಾಯಿ ಲಂಚ ಪಡೆಯದೇ ನಾನು ನನ್ನಿಂದ ಆಗುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ ಎಂದು ಸೌಮ್ಯ ರೆಡ್ಡಿ ತಿಳಿಸಿದ್ದಾರೆ. ನಾನು ಲಂಚ ಪಡೆದಿದ್ದೇನೆ ಎಂದರೇ ಈಗಲೇ ರಾಜೀನಾಮೆ ನೀಡಲು ಸಿದ್ಧ. ಆದರೆ ವಿನಾಕಾರಣ ನಾನ್ಯಾಕೆ ರಾಜೀನಾಮೆ ನೀಡಲಿ ಎಂದು ಪ್ರಶ್ನೆ ಮಾಡಿದ್ದಾರೆ. ನನ್ನ ರಾಜೀನಾಮೆ ಕೇವಲ ವದಂತಿ ಅಷ್ಟೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Comments