ಕಿಚ್ಚ ಸುದೀಪ್ ಗೆ ಸಿಕ್ತು ಹೊಸ ಬಿರುದು..!!

ಚಂದನವನದ ಬಹುಬೇಡಿಕೆಯ ನಟರಲ್ಲಿ ಕಿಚ್ಚ ಸುದೀಪ್ ಕೂಡ ಒಬ್ಬರು.. ಸ್ಯಾಂಡಲ್ ವುಡ್ ಅಷ್ಟೆ ಅಲ್ಲದೆ ಪರಭಾಷೆಗಳಲ್ಲಿಯೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಕಿಚ್ಚ ಸ್ಪರ್ಶ ಸಿನಿಮಾದಿಂದ ಹಿಡಿದು ಬಿಡುಗಡೆಗೆ ಸಿದ್ದವಾಗಿರುವ ಪೈಲ್ವಾನ್ ಸಿನಿಮಾದವರೆಗೂ ಕೂಡ ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಂಡು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕಿಚ್ಚನಿಗೆ ಹೀಗಾಗಲೇ ಸಾಕಷ್ಟು ಬಿರುದುಗಳು ಸಿಕ್ಕಿವೆ, ಕಿಚ್ಚ, ಅಭಿನಯ ಚಕ್ರವರ್ತಿ, ಬಾದ್ ಶಹಾ ಅಂತೆಲ್ಲಾ ಕರೆಯುತ್ತಾರೆ..
ಬಾದ್ ಶಹಾ ಕಿಚ್ಚ ಸುದೀಪ್ ಗೆ ಈಗಾಗಲೇ ಅಭಿಮಾನಿಗಳು ಪ್ರೀತಿಯಿಂದ ಹಲವು ಹೆಸರು ಕೊಟ್ಟಿದ್ದಾರೆ. ಅಭಿನಯ ಚಕ್ರವರ್ತಿ, ಕಿಚ್ಚ, ಬಾದ್ ಶಹಾ ಅಂತೆಲ್ಲಾ ಏನೇನೋ ಬಿದುರು ನೀಡಿದ್ದಾರೆ. ಈಗ ಅದಕ್ಕೆ ಮತ್ತೊಂದು ಬಿರುದು ಸೇರಿಕೊಂಡಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಿಚ್ಚ ಸುದೀಪ್ ಗೆ ಹೊಸ ಟೈಟಲ್ ಕೊಟ್ಟಿದ್ದು, 'ಪೈಲ್ವಾನ್ ಆಫ್ ರೊಮ್ಯಾನ್ಸ್' ಎಂದು ಕರೆದಿದ್ದಾರೆ. ಪೈಲ್ವಾನ್ ಸಿನಿಮಾದ ಕಣ್ಮಣಿಯೇ ಹಾಡು ಮೊನ್ನೆಯಷ್ಟೇ ಬಿಡುಗಡೆಯಾಗಿದ್ದು, ಆ ಹಾಡಿನಲ್ಲಿ ಕಿಚ್ಚನ ರೊಮ್ಯಾಂಟಿಕ್ ಮೂಡ್ ನೋಡಿ ಸಂತೋಷ್ ಈ ರೀತಿ ಬಿರುದು ನೀಡಿದ್ದಾರೆ. ಕಿಚ್ಚ ಕೂಡಾ ಈ ಬಿರುದನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ. ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಆಗಸ್ಟ್ 29 ಕ್ಕೆ ಬಿಡುಗಡೆಯಾಗಲು ಸಿದ್ದವಾಗಿದೆ. ಅಭಿಮಾನಿಗಳು ಪೈಲ್ವಾನ್ ನ ಕುಸ್ತಿ ನೋಡಲು ಕಾಯುತ್ತಿದ್ದಾರೆ.
Comments