ಮೊದಲ ಮಗುವಿನ ನಿರೀಕ್ಷೆಯಲ್ಲಿ ಮೀಟೂ ಅಭಿಯಾನದ ನಾಯಕಿ..!!

ಸ್ಯಾಂಡಲ್’ವುಡ್ ನಲ್ಲಿ ಒಂದು ಕಾಲದಲ್ಲಿ ಮೀಟೂ ಅಭಿಯಾನ ಜೋರಾಗಿಯೇ ಕೇಳಿ ಬರುತ್ತಿತ್ತು… ನಟಿಯರು ತಮಗಾದ ಶೋಷಣೆಯ ವಿರುದ್ದ ಧನಿಯೆತ್ತಿದ್ದರು.ಅದರಲ್ಲಿ ಶೃತಿ ಹರಿಹರನ್ ಕೂಡ ಒಬ್ಬರು.. ಮೀ ಟೂ ಆರೋಪದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದ್ದ ನಟಿ ಶ್ರುತಿ ಹರಿಹರನ್ ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅರ್ಜುನ್ ಸರ್ಜಾ ಮೇಲೆ ಆರೋಪ ಮಾಡಿದ್ದು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.
ಪ್ರತಿಭಾನ್ವಿತ ನಟಿಯಾಗಿರುವ ಶ್ರುತಿ ಹರಿಹರನ್ ಗರ್ಭಿಣಿಯಾಗಿದ್ದು, ತಾಯಿಯಾಗುವ ಖುಷಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಂತಸವನ್ನು ಹಂಚಿಕೊಂಡಿದ್ದಾರೆ. ನಿನ್ನನ್ನು ನೋಡುವ ಕಾತುರ ನನಗೆ ತಾಳಲು ಆಗುತ್ತಿಲ್ಲ. ಹೊಸ ಪ್ರಯಾಣದ ಸರ್ಕಸ್ ಗೆ ನಿನಗೆ ಸ್ವಾಗತ. ನಿನ್ನನ್ನು ನೋಡಲು ನಾನು ಹಾಗೂ ನಿನ್ನ ತಂದೆ ಕಾತರರಾಗಿದ್ದೇವೆ ಎಂದು ಫೋಟೋ ಪೋಸ್ಟ್ ಮಾಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪವನ್ನು ಮಾಡಿದ್ದರು.. ಆ ಸಮಯದಲ್ಲಿಯೇ ಆಕೆಗೆ ಮದುವೆಯಾಗಿರುವ ವಿಷಯವು ಕೂಡ ಬೆಳಕಿಗೆ ಬಂದಿತ್ತು.. ಅಂದಿನಿಂದ ಚಿತ್ರರಂಗದಿಂದ ಸ್ವಲ್ಪ ದೂರವೇ ಉಳಿದಿದ್ಧಾರೆ.. ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿ ಶೃತಿ ಹರಿಹರನ್ ಇದ್ದಾರೆ
Comments