ಬ್ರೇಕಪ್ ಬಗ್ಗೆ ರಶ್ಮಿಕಾರನ್ನು ಪ್ರಶ್ನಿಸಿದ್ದಕ್ಕೆ ರೊಚ್ಚಿಗೆದ್ದ ವಿಜಯ್ ದೇವರಕೊಂಡ..!!
ಸದ್ಯ ಚಂದನವನ ಸೇರಿ ಪರಭಾಷೆಗಳಲ್ಲೂ ಬ್ಯುಸಿಯಾಗಿರುವ ನಟಿಯೆಂದರೆ ಅದು ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ.. ಕನ್ನಡ ತೆಲುಗು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿರವ ಚಂದನವನದ ಸಾನ್ವಿ ಸದ್ಯ ಬಹುಬೇಡಿಕೆಯ ನಟಿ… ರಕ್ಷಿತ್ ಶೆಟ್ಟಿ ಜೊತೆ ಲವ್ ಬ್ರೇಕಪ್ ಆದ ಮೇಲೆ ರಶ್ಮಿಕಾ ಮೇಲೆ ಸಾಕಷ್ಟು ಗಾಸಿಪ್ ಗಳು ಹುಟ್ಟಿಕೊಂಡವು.. ಇದಕ್ಕೆಲ್ಲಾ ಕಾರಣ ವಿಜಯದೇವರಕೊಂಡ ಜೊತೆ ಕಾಣಿಸಿಕೊಂಡ ರೀತಿ ಎನ್ನುವುದು ಸಾಕಷ್ಟು ಅಭಿಮಾನಿಗಳ ಮಾತು.. ಇದೀಗ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಜೊತೆಗಿನ ಬ್ರೇಕಪ್ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಅವರನ್ನು ಪ್ರಶ್ನೆ ಮಾಡಿದಕ್ಕೆ ತೆಲುಗು ನಟ ವಿಜಯ್ ದೇವರಕೊಂಡ ರೊಚ್ಚಿಗೆದ್ದಿರುವ ಘಟನೆ ನಡೆದಿದೆ.
ರಶ್ಮಿಕಾ ಮಂದಣ್ಣ ತಮ್ಮ ಸಿನಿಮವಾದ ‘ಡಿಯರ್ ಕಾಮ್ರೆಡ್’ ಚಿತ್ರ ಪ್ರಮೋಶನ್‍ಗಾಗಿ ನಟ ವಿಜಯ್ ದೇವರಕೊಂಡ ಜೊತೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ರಶ್ಮಿಕಾ ಅವರನ್ನು ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇಷ್ಟಕ್ಕೆ ವಿಜಯ್ ದೇವರಕೊಂಡ ಸಿಟ್ಟಾಗಿದ್ದಾರೆ. ನನಗೆ ಈಗಲೂ ನಿಮ್ಮ ಪ್ರಶ್ನೆ ಅರ್ಥ ಆಗುತ್ತಿಲ್ಲ. ಈ ವಿಚಾರದಲ್ಲಿ ಬೇರೆಯವರು ಭಾಗಿಯಾಗುವುದು ಸರಿಯಲ್ಲ. ಹೇಗೆ ಬೇರೆಯವರು ಭಾಗಿಯಾಗುತ್ತಾರೆ ಎಂದು ವಿಜಯ್ ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೂಡ ಇದೊಂದು ಬಹಳ ದೊಡ್ಡ ಪ್ರಶ್ನೆಯಾಗಿದ್ದು ಈಗಲೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ರಶ್ಮಿಕಾ ತಿಳಿಸಿದ್ದಾರೆ. ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಜೋಡಿಯ `ಡಿಯರ್ ಕಾಮ್ರೆಡ್’ ಸಿನಿಮಾ ಇದೇ ಜುಲೈ 26ರಂದು ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.. ವಿಜಯ್ ಮತ್ತು ರಶ್ಮಿಕಾ ಜೋಡಿ ಸಿನಿಮಾಗಳಲ್ಲಿ ಸಖತ್ ಆಗಿಯೇ ವರ್ಕೌಟ್ ಆಗುತ್ತಿದೆ.
Comments