ಡಿವೋರ್ಸ್ ನಂತರ ಮತ್ತೊಬ್ಬನ ಜೊತೆ ಲವ್ವಲ್ಲಿ ಬಿದ್ದ ಸ್ಟಾರ್ ನಟಿ..!!
ಬಣ್ಣದ ಲೋಕದಲ್ಲಿ ಲವ್, ಬ್ರೇಕಪ್, ಗಾಸಿಪ್, ಡೇಟಿಂಗ್, ಡಿವೋರ್ಸ್ ಇದೆಲ್ಲಾ ಕಾಮನ್ ಆಗಿಬಿಟ್ಟಿದೆ.. ಡಿವೋರ್ಸ್ ಆದವರು ಎರಡನೆ ಮದುವೆಯಾಗಿ ಬಿಡ್ತಾರೆ, ಅದೇ ರೀತಿಯ ಉದಾಹರಣೆಗಳು ಸಾಕಷ್ಟು ನಡೆದಿವೆ.. ಇದೀಗ ಬಹು ಭಾಷಾ ನಟಿ ಅಮಲಾ ಪೌಲ್ ಸಖತ್ ಸುದ್ದಿಯಾಗಿದ್ದಾರೆ. ಅವರು ಕೂಡ ಮದುವೆಯಾಗಿ ಡಿವೋರ್ಸ್ ಆಗಿರುವ ವಿಚಾರ ತುಂಬಾ ಹಳೆಯದು.. ಅಷ್ಟೆ ಅಲ್ಲದೆ ತಮ್ಮ ಮುಂದಿನ ಸಿನಿಮಾದ ಮೂಲಕ ಭಾರಿ ಸುದ್ದಿಯಲ್ಲಿದ್ದಾರೆ. ಈ ಚಿತ್ರದ ಪೋಸ್ಟರ್ ನಲ್ಲಿ ಅಮಲಾ ಪೌಲ್ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದು, ಚಿತ್ರ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ.
ಅದಷ್ಟೆ ಅಲ್ಲದೆ ಇದರ ಜೊತೆಗೆ ಅವರ ವೈಯಕ್ತಿಕ ಬದುಕಿನ ಕಾರಣಕ್ಕೂ ಕೂಡ ಅಮಲಾ ಪೌಲ್ ಸಖತ್ ಸುದ್ದಿಯಾಗಿದ್ದು, ನಿರ್ದೇಶಕ ವಿಜಯ್ ಜೊತೆಗಿನ ವೈವಾಹಿಕ ಸಂಬಂಧವನ್ನು ಕೊನೆಗೊಳಿಸಿಕೊಂಡಿರುವ ಅಮಲಾ ಪೌಲ್ ತಮಗೆ ಈಗ ಮತ್ತೊಬ್ಬರೊಂದಿಗೆ ಲವ್ ಆಗಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇತ್ತಿಚಿಗಷ್ಟೆ ಅಮಲಾ ಪೌಲ್ ಅವರ ಮೊದಲ ಗಂಡ ವಿಜಯ್ ಎರಡನೇ ಮದುವೆಯಾಗಿದ್ದರು. ಇದೀಗ ಅಮಲಾ ಪೌಲ್ ತಮ್ಮ ಲವ್ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ಪ್ರೀತಿಸುತ್ತಿರುವ ವ್ಯಕ್ತಿ ಚಿತ್ರರಂಗದವರಲ್ಲ… ಬೇರೆ ಕ್ಷೇತ್ರದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಆದರೆ ಸದ್ಯ ನಾವು ಮದುವೆಯ ಬಗ್ಗೆ ಯೋಚನೆ ಮಾಡಿಲ್ಲ ಎಂದಿದ್ದಾರೆ.. ಈ ವ್ಯಕ್ತಿ ಚಿತ್ರರಂಗದಲ್ಲಿ ಇಲ್ಲ. ಬೇರೊಂದು ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿರುವ ಅಮಲಾ ಪೌಲ್, ಸದ್ಯಕ್ಕೆ ನಾನು ಮದುವೆಯ ಕುರಿತು ಯೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ.
Comments