ಸೋಷಿಯಲ್ ಮಿಡೀಯಾದಲ್ಲಿ ಚಿತ್ರನಟಿಗೆ ಅಶ್ಲೀಲ ಕಮೆಂಟ್..!!

ಇತ್ತಿಚಿಗೆ ಸಾಮಾಜಿಕ ಜಾಲತಾಣಗಳನ್ನು ಕೆಟ್ಟದಾಗಿ ಬಳಸಿಕೊಳ್ಳಲು ಶುರು ಮಾಡಿಬಿಟ್ಟಿದ್ದಾರೆ. ಕೆಲವರು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡರೆ ಮತ್ತೆ ಕೆಲವರು ದುರುಪಯೋಗ ಪಡಿಸಿಕೊಳ್ಳಲಿದ್ದಾರೆ. ಅದೇ ರೀತಿಯಾಗಿ ಇದೀಗ ಬಂಗಾಲಿ ಚಿತ್ರನಟಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿರುವ ವ್ಯಕ್ತಿಯನ್ನು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ.
ಅಶ್ಲೀಲ ಪದ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಬಂಗಾಲಿ ಚಿತ್ರನಟಿ ವಿರುದ್ಧ ಬೆದರಿಕೆಯೊಡ್ಡಿದ್ದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಕೋಲ್ಕತಾ ಪೊಲೀಸರು ತಿಳಿಸಿದ್ದಾರೆ. ಖ್ಯಾತ ಚಿತ್ರನಟಿ ಅರುಣಿಮಾ ಘೋಷ್ ನೀಡಿರುವ ದೂರಿನ ಅನ್ವಯ ದಕ್ಷಿಣ ಕೋಲ್ಕತಾದ ಗಾರ್ಫಾ ಪ್ರದೇಶದ ನಿವಾಸಿ ಮುಖೇಶ್ ಶಾ ಎಂಬಾತನನ್ನು ಪೊಲೀಸರು ಬಂಧಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಮೇ 30ರಿಂದ ನಟಿಯ ಸಾಮಾಜಿಕ ಜಾಲತಾಣದ ಪೋಸ್ಟ್ ನಲ್ಲಿ ಅಶ್ಲೀಲ ಕಮೆಂಟ್ ಹಾಕಿ ಬೆದರಿಕೆಯೊಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿ ಮುಖೇಶ್ ಮೇಯುಖ್ ಹೆಸರಿನ ನಕಲಿ ಖಾತೆ ತೆರೆದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತಿಚಿಗೆ ನಟಿಯರ ಪೋಟೊಗಳಿಗೆ ಕೆಟ್ಟದಾಗಿ ಕಮೆಂಟ್ ಹಾಕುವವರ ಸಂಖ್ಯೆ ಹೆಚ್ಚಾಗಿ ಬಿಟ್ಟಿದೆ.. ನಟಿಯರ ಪೋಟೋಗಳನ್ನು ಟ್ರೋಲ್ ಮಾಡುವುದು ಕೂಡ ಕಾಮನ್ ಆಗಿ ಬಿಟ್ಟಿದೆ.
Comments