ಮೈಸೂರು ಅಭಿಮಾನಿಗಳಿಗೆ ಸ್ಪೆಷಲ್ ಥ್ಯಾಂಕ್ಸ್ ತಿಳಿಸಿದ ಪವರ್ ಸ್ಟಾರ್..!! ಕಾರಣ ಏನ್ ಗೊತ್ತಾ..?

ಸ್ಯಾಂಡಲ್'ವುಡ್ ನಲ್ಲಿ ಬಹು ಬೇಡಿಕೆಯ ನಟರಲ್ಲಿ ಪುನೀತ್ ರಾಜ್ ಕುಮಾರ್ ಕೂಡ ಒಬ್ಬರು.. ಚಂದನವನದಲ್ಲಿ ಅಪ್ಪುವಿಗೆ ತನ್ನದೆ ದೊಡ್ಡ ಫ್ಯಾನ್ಸ್ ಬಳಗವೇ ಇದೆ... ಇದೀಗ ಅಪ್ಪು ಯುವರತ್ನ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಯುವರತ್ನ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಮೈಸೂರಿನಲ್ಲಿ ಕೆಲವು ದಿನ ಕಳೆದಿದ್ದ ಪುನೀತ್ ರಾಜ್ ಕುಮಾರ್ ಅಲ್ಲಿನ ಅಭಿಮಾನಿಗಳಿಗೆ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ. ಮೈಸೂರಿನ ಕಾಲೇಜು ಹಾಗೂ ಮತ್ತಿತರ ಜಾಗದಲ್ಲಿ ಶೂಟಿಂಗ್ ಮಾಡುವಾಗ ಪ್ರತಿನಿತ್ಯ ಪವರ್ ಸ್ಟಾರ್ ನೋಡಲು ಕಾಣಿಕೆ ಹೊತ್ತು ಅಭಿಮಾನಿಗಳು ಬರುತ್ತಿದ್ದಾರೆ..
ಅಭಿಮಾನಿಗಳ ಜೊತೆ ಆದಷ್ಟು ಸೆಲ್ಫೀ ತೆಗೆದುಕೊಂಡು ಖುಷಿ ಪಟ್ಟರು. ಆಟೋಗ್ರಾಫ್ ನೀಡಿ ಸಂಭ್ರಮ ಪಟ್ಟರು.. ನಾನು ಸಿಗದ ಅಭಿಮಾನಿಗಳು ಯಾರು ಕೂಡ ಬೇಸರ ಮಾಡಿಕೊಳ್ಳಬೇಡಿ ಎಂದು ಅಪ್ಪು ಮನವಿ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ತಮ್ಮ ತಂದೆ ಡಾ.ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯೊಬ್ಬರ ಬಗ್ಗೆ ವಿಶೇಷವಾಗಿ ಪುನೀತ್ ಹೇಳಿಕೊಂಡಿದ್ದಾರೆ. ಕಸ್ತೂರಿ ನಿವಾಸ ಎಂದು ಹೆಸರಿಟ್ಟುಕೊಂಡು ಮನೆ ತುಂಬಾ ಅಪ್ಪಾಜಿ ಫೋಟೋ, ಛಾಯಾಚಿತ್ರಗಳನ್ನು ಹಾಕಿಕೊಳ್ಳುವ ಅಭಿಮಾನಿಯೊಬ್ಬರ ಅಭಿಮಾನವನ್ನು ಪುನೀತ್ ರಾಜ್ ಕುಮಾರ್ ಕೊಂಡಾಡಿದ್ದಾರೆ. ಈ ರೀತಿಯ ಅಭಿಮಾನಿಗೆ ಅಪ್ಪು ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ. ಅಭಿಮಾನಿಗಳನ್ನು ದೇವರು ಎನ್ನುತ್ತಿದ್ದ ರಾಜು ಕುಮಾರ್ ಅವರ ಸಾಲಿನಲ್ಲಿಯೇ ಅವರ ಮಕ್ಕಳು ಕೂಡ ನಡೆಯುತ್ತಿದ್ದಾರೆ.. ಯುವರತ್ನ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
Comments