ರವಿತೇಜ ಜೊತೆ ಕಾಣಿಸಿಕೊಳ್ಳಲಿದ್ದಾರೆ ಸ್ಯಾಂಡಲ್'ವುಡ್ ನ ಬಸಣ್ಣಿ

ಪರಭಾಷೆಯಿಂದ ಬಂದ ನಟ ನಟಿಯರು ಸ್ಯಾಂಡಲ್ ವುಡ್ ನಲ್ಲಿ ನೆಲೆ ಕಂಡುಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ... ಆದರೂ ಕೆಲವು ನಾಯಕಿಯರು ಚಂದನವನದಲ್ಲಿ ಭರವಸೆಯ ನಾಯಕಿಯರಾಗಿ ಬಿಡುತ್ತಾರೆ. ಅದೇ ಸಾಲಿಗೆ ನಮ್ಮ ಬಸಣ್ಣಿ ಕೂಡ ಸೇರಿಕೊಳ್ಳುತ್ತಾರೆ. ಸ್ಯಾಂಡಲ್ ವುಡ್ ಬಸಣ್ಣಿ ಅಂತಾನೆ ಖ್ಯಾತಿ ಗಳಿಸಿರುವ ನಟಿ ನಟಿ ತಾನ್ಯಾ ಹೋಪ್ ಈಗ ಸಾಲು ಸಾಲು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಕೂಡ ಒಳ್ಳೆಯ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ..
ತಾನ್ಯಾ ಹೋಪ್ ಸದ್ಯ ಕನ್ನಡದಲ್ಲಿ ಖಾಕಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.. ಚಿರಂಜೀವಿ ಸರ್ಜಾ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಖಾಕಿ ಚಿತ್ರದಲ್ಲಿ ತಾನ್ಯಾ ಹೋಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..ಅಷ್ಟೆ ಅಲ್ಲದೆ ಸದ್ಯ ಬಸಣ್ಣಿ ತೆಲುಗಿನ ಸ್ಟಾರ್ ನಟನ ಸಿನಿಮಾಗೆ ಆಯ್ಕೆ ಆಯ್ಕೆಯಾಗಿದ್ದಾರೆ. ತೆಲುಗು ನಟ ರವಿ ತೇಜಾ ಅಭಿನಯದ ಡಿಸ್ಕೋ ರಾಜ ಸಿನಿಮಾದಲ್ಲಿ ತಾನ್ಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡಿಸ್ಕೋ ರಾಜ ಸಿನಿಮಾದಲ್ಲಿ ತಾನ್ಯ ಸೈಂಟಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಬಗ್ಗೆ ಹೆಚ್ಚೇನು ಬಿಟ್ಟುಕೊಡದ ತಾನ್ಯಾ ರವಿ ತೇಜಾ ಜೊತೆ ಅಭಿನಯಿಸಲು ಸಖತ್ ಎಕ್ಸಾಯಿಟ್ ಆಗಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ತಾನ್ಯಾ ಹೋಪ್ ಜೊತೆ ಮತ್ತಿಬ್ಬರು ನಟಿಯರು ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅಂದ್ರೆ ಮತ್ತೋರ್ವ ನಟಿ ಕನ್ನಡತಿ ನಭಾ ನಟೇಶ್ ಕೂಡ ಈ ಚಿತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ. ನಾಗಶೇಖರ್ ಆಕ್ಷನ್ ಕಟ್ ಹೇಳುತ್ತಿರುವ ಬಾಲಿವುಡ್ ಸಿನಿಮಾದಲ್ಲಿ ತಾನ್ಯಾ ಹೋಪ್ ನಾಯಕಿಯಾಗುವ ಮೂಲಕ ಹಿಂದಿ ಸಿನಿಮಾದಲ್ಲಿಯೂ ಕೂಡ ಮಿಂಚಲು ಸಜ್ಜಾಗಿದ್ದಾರೆ. 'ಯಜಮಾನ' ಮತ್ತು 'ಅಮರ್' ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು..
Comments