ಬೆತ್ತಲೆ ದೃಶ್ಯದ ನಂತರ ಲಿಪ್ ಲಾಕ್ ವಿಡಿಯೋದಲ್ಲಿ ಕಾಣಿಸಿಕೊಂಡ ಸ್ಯಾಂಡಲ್'ವುಡ್ ಸ್ಟಾರ್..!!

ಸೆಲಬ್ರೆಟಿಗಳು ಆಗಿಂದಾಗೆ ಸಖತ್ ಸುದ್ದಿಯಾಗುತ್ತಿರುತ್ತಾರೆ.. ಅದರಲ್ಲೂ ನಟಿಮಣಿಯರಂತೂ ತಮ್ಮ ಉಡುಗೆ ತೊಡುಗೆಗಳ ಮೂಲಕವೇ ಸಖತ್ ಸುದ್ದಿಯಾಗಿ ಬಿಡುತ್ತಾರೆ. ಕೆಲವು ನಟಿಯರು ಬಿಕಿನಿ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾ ಟ್ರೋಲ್ ಆಗಿ ಸುದ್ದಿಯಾಗುತ್ತಾರೆ. ಇನ್ನೂ ಕೆಲವರು ತಮ್ಮ ತಮ್ಮ ಬೆತ್ತಲೆ ಪೋಟೋಗಳನ್ನು ಹಾಕಿ ಸುದ್ದಿಯಾಗುತ್ತಾರೆ.. ಇತ್ತಿಚಿಗೆ ಬಹುಭಾಷ ನಟಿ ಅಮಲಾ ಪೌಲ್ ಕೂಡ ಸುದ್ದಿಯಾಗಿದ್ದರು.
ಅಮಲಾ ಪೌಲ್ ಅವರು ತಮಿಳಿನಲ್ಲಿ ನಟಿಸಿದ ‘ಅದಾಯಿ’ ಸಿನಿಮಾದ ಟೀಸರ್ ನಲ್ಲಿ ಬೆತ್ತಲಾಗಿ ಕಾಣಿಸಿಕೊಂಡಿದ್ದರು. ಈ ಟೀಸರ್‍ನಲ್ಲಿ ನಟಿ ಸಂಪೂರ್ಣ ಬೆತ್ತಲಾಗಿ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಖ್ಯಾತ ನಿರ್ದೇಶಕರಾದ ಕರಣ್ ಜೋಹರ್ ತಮ್ಮ ಟ್ವಿಟ್ಟರಿನಲ್ಲಿ ನಟಿ ಅಮಲಾ ಪೌಲ್ ನಟಿಸಿದ ಅದಾಯಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಈ ಟೀಸರ್ ಒಂದೂವರೆ ನಿಮಿಷವಿದ್ದು, ಅಮಲಾ ಈ ಟೀಸರ್ ನ ಕೊನೆಯಲ್ಲಿ ಸಂಪೂರ್ಣ ಬೆತ್ತಲಾಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಚಿತ್ರದಲ್ಲಿ ಬೆತ್ತಲೆ ದೃಶ್ಯದಲ್ಲಿ ಅಮಲಾ ಪೌಲ್ ಕಾಣಿಸಿಕೊಂಡಿದ್ದಾರೆ.ಚಿತ್ರಕ್ಕೆ ಅವಶ್ಯಕತೆ ಇದ್ದ ಹಿನ್ನೆಲೆಯಲ್ಲಿ ಅಂತಹ ದೃಶ್ಯದಲ್ಲಿ ಅಭಿನಯಿಸಬೇಕಾಯ್ತು ಎಂದು ಅವರು ಹೇಳಿಕೊಂಡಿದ್ದಾರೆ. ಟೀಸರ್ ನಲ್ಲಿ ಹೀಗೆ ಬೆತ್ತಲಾಗಿ ಕಾಣಿಸಿಕೊಂಡಿದ್ದ ಅಮಲಾ ಪೌಲ್ ಮತ್ತೊಂದು ಟೀಸರ್ ನಲ್ಲಿ ಲಿಪ್ ಲಾಕ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಸಹನಟಿ ವಿಜೆ ರಮ್ಯಾ ಅವರನ್ನು ಅಮಲಾ ಪೌಲ್ ಚುಂಬಿಸಿದ ದೃಶ್ಯಗಳಿದ್ದು ಇದು ಕೂಡ ಮೊದಲ ಟೀಸರ್ ನಂತೆಯೇ ಸಖತ್ ಸದ್ದು ಮಾಡಿದೆ. ಈ ಸಿನಿಮಾ ಜುಲೈ 19 ರಂದು ತೆರೆ ಮೇಲೆ ಬರಲಿದೆ.
Comments