ರಾಧಿಕಾ ಕುಮಾರಸ್ವಾಮಿ ಮಿಂಚಲಿದ್ದಾರೆ ಪಂಚ ಭಾಷೆಯಲ್ಲಿ..!!!

ಚಂದನವನದ ನಿರೀಕ್ಷಿತ ಸಿನಿಮಾಗಳಲ್ಲಿ ರಾಧಿಕ ಕುಮಾರಸ್ವಾಮಿ ಅಭಿನಯದ ದಮಯಂತಿ ಕೂಡ ಒಂದು.. ಈ ಸಿನಿಮಾ ರಾಧಿಕ ಕುಮಾರಸ್ವಾಮಿ ಸುಮಾರು ವರ್ಷಗಳ ಬಳಿಕ ತೆರೆಮೇಲೆ ಬರುತ್ತಿರುವ ಸಿನಿಮಾ.. ಇದೀಗ ಈ ಸಿನಿಮಾ ತೆರೆ ಮೇಲೆ ಬರಲು ಸಿದ್ದವಾಗಿದೆ. ಈಗಾಗಲೇ ಈ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿದೆ. ರಾಧಿಕ ಕುಮಾರಸ್ವಾಮಿ ಇದೇ ತಿಂಗಳು ತೆರೆ ಮೇಲೆ ಬರುತ್ತಿದ್ದಾರೆ. ಆದರೆ ಸಿನಿಮಾ ಬಿಡುಗಡೆಯ ಮೂಲಕ ಅಲ್ಲ.. ಬದಲಿಗೆ ಟೀಸರ್ ಮೂಲಕ ಎಂಟ್ರಿ ಕೊಡಲಿದ್ದಾರೆ.
'ದಮಯಂತಿ' ಚಿತ್ರದ ಟೀಸರ್ ಈ ತಿಂಗಳ ಕೊನೆಯಲ್ಲಿ ತೆರೆಗೆ ಬರುತ್ತಿದೆ,.. ಈಗಾಗಲೆ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ 'ದಮಯಂತಿ' ರಿಲೀಸ್ ಗೆ ಬೇಕಾಗಿರುವ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಈ ಸಿನಿಮಾದ ಮತ್ತೊಂದು ವಿಶೇಷ ಅಂದ್ರೆ ದಮಯಂತಿ ಸಿನಿಮಾ ಐದು ಭಾಷೆಯಲ್ಲಿ ಒಂದೇ ಸಮಯಕ್ಕೆ ತೆರೆಗೆ ಬರುತ್ತಿದೆ. ದಮಯಂತಿ ಸಿನಿಮಾದ ಟೀಸರ್ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಿಂದಿಯಲ್ಲಯೂ ಕೂಡ ತೆರೆಗೆ ಬರುತ್ತಿದೆ. ಹಿಂದಿ ಮತ್ತು ಮಲಯಾಳಂಗೆ 'ದಮಯಂತಿ' ಸಿನಿಮಾವನ್ನು ಡಬ್ ಮಾಡಲಾಗಿದೆ. ತಮಿಳು ಮತ್ತು ತೆಲುಗು ಭಾಷೆಯಲ್ಲಿ ಕನ್ನಡದಂತೆ ನೇರವಾಗಿ ಚಿತ್ರೀಕರಣ ಮಾಡಿರುವುದು ಮತ್ತೊಂದು ವಿಶೇಷವಾಗಿದೆ. ಆಗಸ್ಟ್ ತಿಂಗಳಲ್ಲಿ ಆಡಿಯೋ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಹೊಸ ಲುಕ್ ನಲ್ಲಿ, ಹೊಸ ಇನ್ನಿಂಗ್ಸ್ ಶುರು ಮಾಡಿರುವ ರಾಧಿಕ ರವರ ಸಿನಿಮಾ ಹೇಗಿದೆ ಎಂಬುದನ್ನು ಕಾದು ನೋಡಬೇಕಿದೆ.
Comments