ಆತ ತನ್ನ ಕಣ್ಣುಗಳಿಂದಲೇ ನನ್ನನ್ನು ರೇಪ್ ಮಾಡಿದ ಎಂದ ನಟಿ..!
ಬಾಲಿವುಡ್ ಮಂದಿ ಇತ್ತಿಚಿಗೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ..ಅದರಲ್ಲೂ ನಟಿ ಮಣಿಯರು ತಮಗಾದ ಕಹಿ ಅನುಭವವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೂ ಮೀಟೂ ಅಭಿಯಾನ ಬಂದ ಮೇಲಂತೂ ಸಾಕಷ್ಟು ನಟಿಮಣಿಯರು ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದರು.. ಇದೀಗ ಬಾಲಿವುಡ್ ನಟಿ ಇಶಾ ಗುಪ್ತಾ ತಮ್ಮ ಮೇಲಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.
ಇಶಾ ಗುಪ್ತಾ ಅಭಿನಯದ 'ಒನ್ ಡೇ: ಜಸ್ಟೀಸ್ ಡೆಲಿವೆರ್ಡ್' ಚಿತ್ರ ಶುಕ್ರವಾರವಷ್ಟೆ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಅನುಪಮ್ ಖೇರ್ ಕೂಡ ಅಭಿನಯಿಸಿದ್ದಾರೆ. ಚಿತ್ರ ಬಿಡುಗಡೆ ಸಂಭ್ರಮದಲ್ಲಿದ್ದ ಇಶಾ ಗುಪ್ತಾ , ಸ್ನೇಹಿತರ ಜೊತೆ ಪಾರ್ಟಿ ಮಾಡಲು ಹೋಗಿದ್ದರಂತೆ. ಆದರೆ ಆ ಅನುಭವ ತುಂಬಾ ಕೆಟ್ಟದಾಗಿತ್ತು ಎಂದು ಇಶಾ ಗುಪ್ತಾ ಹೇಳಿಕೊಂಡಿದ್ದಾರೆ. ಸೋಷಿಯಲ್ ಮಿಡೀಯಾದಲ್ಲಿ ಈ ಘಟನೆ ಬಗ್ಗೆ ಇಶಾ ಗುಪ್ತಾ ಬರೆದುಕೊಂಡಿದ್ದಾರೆ. ಹೊಟೇಲ್ ಉದ್ಯಮಿ ರೋಹಿತ್ ವಿಗ್ ಕೆಟ್ಟದಾಗಿ ನಡೆದುಕೊಂಡಿದ್ದಾರಂತೆ. ರೋಹಿತ್ ತನ್ನ ಕಣ್ಣುಗಳಲ್ಲಿಯೇ ನನ್ನನ್ನು ಅತ್ಯಾಚಾರವೆಸಗಿದ್ದಾನೆ. ಅಂತಹ ಕೆಟ್ಟ ಅನುಭವ ನನಗೆ ಆಗಿದೆ ಎಂದು ಇಶಾ ಬರೆದುಕೊಂಡಿದ್ದಾರೆ. ನನ್ನಂತಹ ಮಹಿಳೆಯೇ ಭಯಪಟ್ಟುಕೊಂಡ್ರೆ ಇನ್ನುಳಿದವರ ಕಥೆ ಏನು ಎಂದು ಇಶಾ ಸಾಮಾಜಿಕ ಜಾಲತಾಣದ ಮೂಲಕ ಪ್ರಶ್ನೆ ಮಾಡಿದ್ದಾರೆ. ನಟಿ ಇಶಾ ಗುಪ್ತಾ ಜೊತೆ ಇಬ್ಬರು ಬಾಡಿಗಾರ್ಡ್ ಗಳಿದ್ದರಂತೆ. ರೋಹಿತ್ ಇಶಾಳನ್ನು ನೋಡುತ್ತಿದ್ದ ರೀತಿ ಇಶಾಗೆ ಅತ್ಯಾಚಾರವೆಸಗಿದ ಅನುಭವ ನೀಡಿದೆಯಂತೆ. ಹಾಗಾಗಿ ರೋಹಿತ್ ಗೆ ಸಾಮಾಜಿಕ ಜಾಲತಾಣದಲ್ಲಿಯೇ ಇಶಾ ಬೈದಿದ್ದಾರೆ. ಸಿನಿಮಾ ನಟಿಯರ ಜೊತೆ ಬಾಡಿಗಾರ್ಡ್ಗಳು ಇದ್ದೆ ಈ ರೀತಿಯಾದ್ರೆ ಸಾಮಾನ್ಯ ಹೆಣ್ಣು ಮಕ್ಕಳ ಕಥೇಯೇನು..? ಎಂಬುದು ಇಶಾ ಗುಪ್ತಾ ಅವರ ಪ್ರಶ್ನೆಯಾಗಿದೆ.
Comments