ಮಧ್ಯರಾತ್ರಿ ಪ್ರಜ್ವಲ್ ದೇವರಾಜ್ ಮನೆಗೆ ಎಂಟ್ರಿ ಕೊಟ್ಟ ದರ್ಶನ್..!!
ಚಂದನವನದ ಬಹು ಬೇಡಿಕೆಯ ನಟರಲ್ಲಿ ದರ್ಶನ್ ಮುಂಚೂಣಿಯಲ್ಲಿದ್ದಾರೆ.. ಆಗಸ್ಟ್ 2 ಕ್ಕೆ ಅವರ ಬಹು ನಿರೀಕ್ಷಿತ ಸಿನಿಮಾವಾದ ಕುರುಕ್ಷೇತ್ರ ಬಿಡುಗಡೆಯಾಗಲಿದೆ. ದರ್ಶನ್ಗೆ ಬಿಡುವಿನ ವೇಳೆ ಸಿಗುವುದೇ ತುಂಬಾ ಅಪರೂಪ, ಒಂದು ವೇಳೆ ಸಮಯ ಸಿಕ್ಕರೂ ಕೂಡ ಪ್ರಾಣಿ ಪಕ್ಷಗಳ ಜೊತೆ ಟೈಮ್ ಪಾಸ್ ಮಾಡುತ್ತಾ ಖುಷಿ ಪಡುತ್ತಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದಚ್ಚು ಮತ್ತೊಬ್ಬ ಹೀರೋ ಗೆ ಸರ್ಪ್ರೈಸ್ ಕೊಟ್ಟಿದ್ದಾರೆ.
ಎಸ್.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗುರುವಾರ ಮಧ್ಯರಾತ್ರಿ ನಟ ಪ್ರಜ್ವಲ್ ದೇವರಾಜ್ ಅವರ ಮನೆಗೆ ಸರ್ಪ್ರೈಸ್ ಭೇಟಿ ಕೊಟ್ಟಿದ್ದಾರೆ. ದರ್ಶನ್ ಬರುತ್ತಾರೆ ಎಂಬ ಮಾಹಿತಿ ಪ್ರಜ್ವಲ್ ದೇವರಾಜ್ ಮತ್ತು ಅವರ ಕುಟುಂಬಕ್ಕೆ ಗೊತ್ತಿರಲಿಲ್ಲ ಎನ್ನುತ್ತಾರೆ. ದರ್ಶನ್ ಬಂದ ಕೂಡಲೇ ಅವರನ್ನು ನೋಡಿ ಅಚ್ಚರಿಗೊಂಡಿದ್ದಾರೆ. ದಚ್ಚು ದೇವರಾಜ್ ಮನೆಗೆ ಭೇಟಿ ನೀಡಲು ಕಾರಣ ಏನ್ ಗೊತ್ತಾ..? ಗುರುವಾರದಂದು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅವರಿಗೆ ಶುಭ ಕೋರುವ ಸಲುವಾಗಿ ದರ್ಶನ್ ಸರ್ಪ್ರೈಸ್ ಭೇಟಿ ಕೊಟ್ಟಿದ್ದಾರಂತೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಹಿರಿಯ ನಟ ದೇವರಾಜ್ ಅವರ ಕುಟುಂಬದೊಂದಿಗೆ ಆತ್ಮೀಯತೆ ಹೊಂದಿದ್ದು, ದೇವರಾಜ್ ಅವರ ಜೊತೆ ತಾರಕ್, ಯಜಮಾನ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. . ಪ್ರಜ್ವಲ್ ದೇವರಾಜ್ ಇತ್ತೀಚೆಗೆ ಸರ್ಕಾರಿ ಶಾಲೆಯೊಂದನ್ನು ದತ್ತು ತೆಗೆದುಕೊಂಡಿರುವುದಕ್ಕೆ ದರ್ಶನ್ ಟ್ವೀಟ್ ಮೂಲಕ ಖುಷಿ ವ್ಯಕ್ತಪಡಿಸಿದರು.. ಸ್ಯಾಂಡಲ್ ವುಡ್ ನ ಇಂತಹ ಬದಲಾವಣೆಗಳು ಸಾಕಷ್ಟು ಅಭಿಮಾನಿಗಳಿಗೆ ಖುಷಿ ನೀಡುತ್ತದೆ.
Comments