ಬೆತ್ತಲೆ ಫೋಟೋ ಹಾಕಿ ಹುಟ್ಟುಹಬ್ಬ ಮಾಡಿಕೊಂಡ ಖ್ಯಾತ ನಟಿ..!!

ಸೆಲಬ್ರೆಟಿಗಳು ಯಾವಾಗಲೂ ಸದ್ದು ಮಾಡುತ್ತಾ ಸುದ್ದಿಯಲ್ಲಿರುತ್ತಾರೆ… ಅದರಲ್ಲೂ ಹಾಲಿವುಡ್, ಬಾಲಿವುಡ್ ಮಂದಿ ಸಖತ್ ಸದ್ದು ಮಾಡುತ್ತಿರುತ್ತಾರೆ.. ಟ್ರೋಲ್ ಮಾಡುವವರ ಬಾಯಿಗೆ ಯಾವಾಗಲೂ ಕೂಡ ಆಹಾರವಾಗುತ್ತಲೇ ಇರುತ್ತಾರೆ. ಇದೀಗ ಹಾಲಿವುಡ್ ನ ಮತ್ತೊಬ್ಬ ನಟಿ, ಗಾಯಕಿ ತನ್ನ ಬೆತ್ತಲೆ ಪೋಟೋ ಹಾಕಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಸೆಲಬ್ರೆಟಿಗಳು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಳ್ಳುವುದು ಕಾಮನ್. ಆದರೆ ಹಾಲಿವುಡ್‍ನ ಖ್ಯಾತ ನಟಿ, ಗಾಯಕಿ ತನ್ನ ಬೆತ್ತಲೆ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.
ಹಾಲಿವುಡ್‍ನ ಮೀನ್ ಗಲ್ರ್ಸ್, ಫ್ರೀಕಿ ಫ್ರೈಡೇ ಸಿನಿಮಾದ ನಟಿ ಲಿಂಡ್ಸೆ ಲೋಹನ್ ಜುಲೈ 2ರಂದು 33ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಲಿಂಡ್ಸೆ ಕನ್ನಡಿಯ ಮುಂದೆ ಬೆತ್ತಲಾಗಿ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡು ಸಾಮನಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಫೋಟೋದಲ್ಲಿ ನಟಿ ಲಿಂಡ್ಸೆ ಆಭರಣಗಳನ್ನು ಬಿಟ್ಟು ಬೇರೆ ಏನನ್ನುಹಾಕಿಕೊಂಡಿಲ್ಲ.. ಹುಟ್ಟುಹಬ್ಬ ಆಚರಣೆಗೂ 2 ನಿಮಿಷ ಮುನ್ನ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿ ಪಡ್ಡೆ ಹುಡುಗರ ಹಾರ್ಟಿಗೆ ಕನ್ನ ಹಾಕಿ ಅವರ ನಿದ್ದೆ ಕದ್ದಿದ್ದಾರೆ. ಅಷ್ಟೆ ಅಲ್ಲದೆ ಫೋಟೋ ಹಾಕಿದ ಬೆನ್ನಲಿಯೇ ಲಿಂಡ್ಸೆ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಲಿಂಡ್ಸೆ ಒಳ ಉಡುಪುಗಳ ಮೇಲೆ ಬಿಳಿ ಬಣ್ಣದ ತೆಳುವಾದ ಶರ್ಟ್ ಧರಿಸಿ ಡಾನ್ಸ್ ಮಾಡಿದ್ದಾರೆ. ಈ ವಿಡೀಯೋ ಕೂಡ ಸಖತ್ ವೈರಲ್ ಆಗಿದೆ. ಈ ಪೋಟೋ ಟ್ರೋಲಿಗರ ಕೈಗೆ ಸಿಕ್ಕರೆ ಮುಗಿತು ಕಥೆ..
Comments