ಈ ಖ್ಯಾತ ನಟಿಗೆ ಮದುವೆಯಾಗದೇ ಇದ್ರೂ 3 ವರ್ಷದ ಮಗಳಿದ್ದಾಳಂತೆ..!!!

ಸೆಲಬ್ರೆಟಿಗಳು ಒಂದಲ್ಲ ಒಂದು ವಿಷಯಕ್ಕೆ ಸದಾ ಸುದ್ದಿಯಲ್ಲಿಯೇ ಇರುತ್ತಾರೆ.. ಅದರಲ್ಲೂ ಬಾಲಿವುಡ್ ನಟಿಯರು ಮಾತ್ರ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಇದೀಗ ಬಾಲಿವುಡ್ ನಟಿಯೊಬ್ಬಳು ಸಂದರ್ಶನವೊಂದರಲ್ಲಿ ತನ್ನ ವೈಯಕ್ತಿಕ ಜೀವನದ ಬಗ್ಗೆ ತಿಳಿಸಿದ್ದಾರೆ. ಈಕೆ ಮದುವೆಯಾಗದೆ ನನಗೆ 3 ವರ್ಷದ ಮಗಳಿದ್ದಾಳೆ ಎಂದು ಹೇಳಿಕೊಂಡಿದ್ದಾರೆ. ಎಸ್.. ಮದುವೆಯಾಗದಿದ್ದರೂ ಮಕ್ಕಳನ್ನು ಮಾಡಿಕೊಳ್ಳುವುದರಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಬಾಲಿವುಡ್ ನಟಿ ಮಾಹಿ ಗಿಲ್ ಹೇಳಿಕೊಂಡಿದ್ದಾರೆ…
ಬಾಲಿವುಡ್ ನಟಿ ಮಾಹಿ ಗಿಲ್ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದರು.. ಇದೇ ಸಮಯದಲ್ಲಿ ಮಾಹಿಗಿಲ್ ನಾನು ಹಲವು ದಿನಗಳಿಂದ ಲಿವಿನ್ ರಿಲೇಶನ್‍ಶಿಪ್‍ನಲ್ಲಿ ಇದ್ದೇನೆ. ಅಲ್ಲದೆ ನನಗೆ ಈಗ ಮಗಳು ಕೂಡ ಇದ್ದಾಳೆ. ಅಗಸ್ಟ್ ತಿಂಗಳು ಬಂದರೆ ಆಕೆಗೆ ಮೂರು ವರ್ಷ ಆಗುತ್ತದೆ ಎಂದು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮೊದಲ ಬಾರಿಗೆ ನಟಿ ಮಾಹಿಗಿಲ್ ಹೇಳಿಕೊಂಡಿದ್ದಾರೆ. ಮಗಳಿಗೆ ತಾಯಿ ಆಗಿರುವ ವಿಷಯದ ಬಗ್ಗೆ ನನಗೆ ಹೆಮ್ಮೆ ಇದೆ. ಹೌದು. ನಾನು ಇನ್ನೂ ಮದುವೆ ಮಾಡಿಕೊಂಡಿಲ್ಲ. ಮದುವೆ ಮಾಡಿಕೊಳ್ಳಬೇಕು ಎನಿಸಿದಾಗ ನಾನು ಮದುವೆ ಮಾಡಿಕೊಳ್ಳುತ್ತೇನೆ. ಮದುವೆ ಎನ್ನುವುದು ಅದು ನನ್ನ ವೈಯಕ್ತಿಕ ನಿರ್ಧಾರ ಎಂದು ಹೇಳಿದ್ದಾರೆ. ಮದುವೆ ಎನ್ನುವುದು ಒಂದು ಸುಂದರ ವಿಷಯ. ಆದರೆ ಮದುವೆ ಮಾಡಿಕೊಳ್ಳುವುದು ಅಥವಾ ಮಾಡದೇ ಇರುವುದು ಅದು ಅವರ ವೈಯಕ್ತಿಕ ಆಯ್ಕೆ ಎಂದು ಮಾಹಿ ಸಂದರ್ಶನದಲ್ಲಿ ಹೇಳಿದ್ದಾರೆ. ಒಟ್ಟಾರೆಯಾಗಿ ಬಾಲಿವುಡ್ ನಟಿಯರು ಸದಾ ಸುದ್ದಿಯಲ್ಲಿರಲು ಸಾಕಷ್ಟು ಕಾರಣಗಳಿವ..ಅದರಲ್ಲಿ ಇದೂ ಕೂಡ ಒಂದು ಎನ್ನಬಹುದು.. ಮದುವೆಯಾಗದೆ ಮಕ್ಕಳಿರುವ ನಟಿಯರು ಇನ್ನೂ ಅದೆಷ್ಟು ಜನರು ಇದ್ದಾರೋ ಗೊತ್ತಿಲ್ಲ…
Comments