ಡಿ ಬಾಸ್’ನ ಚಾಲೆಂಜ್ ಗೆ ಸೈ ಎಂದ  ಅಭಿಮಾನಿಗಳು..!!

03 Jul 2019 1:40 PM | Entertainment
336 Report

ಸ್ಯಾಂಡಲ್ ವುಡ್ ನಲ್ಲಿ ಕೆಲವೊಂದು ಸುದ್ದಿಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತವೆ... ಅದರಲ್ಲೂ ನೆನ್ನೆಯಷ್ಟೆ ದರ್ಶನ್ ಮಾಡಿದ ಟ್ವೀಟ್ ಹೆಚ್ಚು ಸಂಚಲನವನ್ನು.. ಅದು ಬಾಕ್ಸ್'ಆಪೀಸ್ ನ ಸುಲ್ತಾನ, ಸ್ಯಾಂಡಲ್ ವುಡ್'ನ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇದೀಗ ಮತ್ತೊಬ್ಬ ಸೆಲಬ್ರಿಟಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ ಎನ್ನುವ ವಿಷಯ..  ದರ್ಶನ್ ಯಾವ ಸೆಲಬ್ರೆಟಿಗೆ ಓಪನ್ ಚಾಲೆಂಜ್ ಹಾಕುತ್ತಿದ್ದಾರೆ ಎಂಬ ಪ್ರಶ್ನೆ ಮೂಡಿದ್ದಂತೂ ಸುಳ್ಳಲ್ಲ..

ಎಸ್… ಒಬ್ಬ ಸೆಲೆಬ್ರಿಟಿ ಯಿಂದ ಮತ್ತೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಮಧ್ಯಾಹ್ನ ಫೇಸ್ಬುಕ್ ಲೈವ್ ಬರ್ತೀನಿ ಬಂದಾಗ ಎಲ್ಲಾನು ತಿಳಿಸುತ್ತೇನೆ ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ಹೆಚ್ಚು ಸದ್ದು ಮಾಡಿತ್ತು..ಡಿ ಬಾಸ್ ತಮ್ಮ ಅಧಿಕೃತ ಟ್ವೀಟರ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ. ಎಲ್ಲಾ ಅಭಿಮಾನಿಗಳು ದರ್ಶನ್ ಯಾರಿಗೆ ಚಾಲೆಂಜ್ ಹಾಕುತ್ತಾರೆ, ಏನಂತ ಚಾಲೆಂಜ್ ಹಾಕುತ್ತಾರೆ ಕಾಯುತ್ತಿದ್ದಾರೆ..ಇದಕ್ಕೆಲ್ಲಾ ಸದ್ಯ ಉತ್ತರ ಸಿಕ್ಕಿದೆ. ಅಭಿಮಾನಿಗಳೇ ನನಗೆ ಸೆಲೆಬ್ರಿಟಿಗಳು. ಅವರು ಕುರುಕ್ಷೇತ್ರ ಸಿನಿಮಾ ಸುತ್ತ ವಿವಾದ ಹುಟ್ಟುಹಾಕದೇ ನೋಡುವುದೇ ನನ್ನ ಸವಾಲು ಎಂದು ಚಾಲೆಂಜ್ ಹಾಕಿದ್ದ ಡಿ ಬಾಸ್ ದರ್ಶನ್ ಗೆ ಅಭಿಮಾನಿಗಳು ಸೈ ಎಂದಿದ್ದಾರೆ.  ಕುರುಕ್ಷೇತ್ರದಲ್ಲಿ ನನ್ನ ಕಟೌಟ್ ಇಲ್ಲ, ಫೋಟೋ ಇಲ್ಲ ಎಂದೆಲ್ಲಾ ಕಿತ್ತಾಡದೇ ಒಂದು ಒಳ್ಳೆಯ ಸಿನಿಮಾ ಎಂದು ಮನೆ ಮಂದಿಯೆಲ್ಲಾ ಕುಳಿತು ನೋಡಬೇಕು ಎಂದು ತಿಳಿಸಿದ್ದಾರೆ.

Edited By

Manjula M

Reported By

Manjula M

Comments