ಅಭಿಮಾನಿಗಳ ಆಸೆ ಪೂರೈಸುತ್ತಾರಾ ಕರ್ನಾಟಕದ ಕ್ರಶ್ ಸಾನ್ವಿ..!!
ಸ್ಯಾಂಡಲ್ ವುಡ್ ನಲ್ಲಿ ಅತೀ ಕಡಿಮೆ ಅವಧಿಯಲಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ ನಾಯಕಿ ಎಂದರೆ ಅದು ರಶ್ಮಿಕಾ ಮಂದಣ್ಣ. ಚಂದನವನಕ್ಕೆ ಕಿರಿಕ್ ಪಾರ್ಟಿಯ ಸಾನ್ವಿಯಾಗಿ ಎಂಟ್ರಿ ಕೊಟ್ಟ ಈಕೆ ಮಾಡಿದೆಲ್ಲಾ ಹಿಟ್ ಸಿನಿಮಾಗಳೇ.. ಗೀತಾ ಗೋವಿಂದಂ ಸಿನಿಮಾದಿಂದ ಒಂದಿಷ್ಟು ಗಾಸಿಪ್ ಗೆ ಒಳಗಾಗಿದ್ದನ್ನು ಬಿಟ್ಟರೆ ಈಕೆ ಸೋಲಿನ ಕಡೆ ಮುಖ ಮಾಡಲೇ ಇಲ್ಲ.. ಅಭಿಮಾನಿಗಳ ಮನಗೆದ್ದ ಈಕೆ ಕರ್ನಾಟಕದ ಕ್ರಶ್ ಆಗಿ ಬಿಟ್ಟರು.. ಕೇವಲ ಕನ್ನಡದಷ್ಟೆ ಅಲ್ಲದೆ ಪರಭಾಷೆಯಲ್ಲಿಯೂ ಕೂಡ ಮಿಂಚಿ ಸೈ ಎನಿಸಿಕೊಂಡಿದ್ದಾರೆ.
ಕರ್ನಾಟಕದ ಕ್ರಶ್ ಸಾನ್ವಿ ಅಪ್ಪಟ ಕನ್ನಡದ ಹುಡುಗಿ.. ಈಗ ತೆಲುಗು, ತಮಿಳಿನಲ್ಲೂ ಕೂಡ ಸಖತ್ ಸದ್ದು ಮಾಡುತ್ತಿದ್ದಾರೆ. ಸಿನಿಮಾ ರಂಗಕ್ಕೆ ಕಾಲಿಟ್ಟ ಕೆಲವೇ ಸಮಯದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ರಶ್ಮಿಕಾ ಮಂದಣ್ಣ.. ಒಂದು ರೀತಿಯಲ್ಲಿ ಹೀರೋಗಳಿಗೆ ಲಕ್ಕಿ ಹೀರೋಯಿನ್ ಅಂತಾನೇ ಗುರುತಿಸಿಕೊಂಡಿರುವ ರಶ್ಮಿಕಾ ಈಗ ತಮಿಳಿನಲ್ಲಿ ಕಾರ್ತಿ ಜತೆ ಸಿನಿಮಾ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಸೂಪರ್ ಸ್ಟಾರ್ ಗಳಿಗೆ ನಾಯಕ ನಟಿಯಾಗಿದ್ದಾರೆ. ಇದೀಗ ತಮಿಳಿನ ಇಳಯದಳಪತಿಯಾದ ವಿಜಯ್ ಗೆ ರಶ್ಮಿಕಾ ನಾಯಕಿಯಾಗಬೇಕೆಂದು ಅಭಿಮಾನಿಗಳು ಒತ್ತಾಯ ಮಾಡುತಿದ್ದಾರೆ.. ಆದಷ್ಟು ಬೇಗ ವಿಜಯ್ ಜೊತೆ ರಶ್ಮಿಕಾ ಅಭಿನಯಿಸಲಿ ಎಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. . ಇತ್ತಿಚಿಗಷ್ಟೆ ವಿಜಯ್ ಹುಟ್ಟುಹಬ್ಬದಂದು ರಶ್ಮಿಕಾ ವಿಜಯ್ ಗೆ ವಿಶ್ ಮಾಡಿದ್ದಾರೆ.. ಈ ಟ್ವೀಟ್ ನೋಡಿದ ಅಭಿಮಾನಿಗಳು ರಶ್ಮಿಕಾಗೆ ಬೇಗ ವಿಜಯ್ ಜತೆ ನಿಮ್ಮನ್ನು ನೋಡುವ ನಮ್ಮ ಆಸೆ ನೆರವೇರಿಸಿ ಎಂದು ಕೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ಅಭಿಮಾನಿಗಳು ವಿಜಯ್ ಮತ್ತು ರಶ್ಮಿಕಾ ಕಾಂಬೀನೆಷನ್ ನಲ್ಲಿ ಸಿನಿಮಾ ಬರುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.
Comments