ಕಣ್ಣೀರಿಟ್ಟ ಡಿಂಪಲ್ ಕ್ವೀನ್..!! ಕಾರಣ ಏನ್ ಗೊತ್ತಾ..?
ಚಂದನವನದಲ್ಲಿ ಸದ್ಯ ಸದ್ದು ಮಾಡುತ್ತಿರುವ ಸಿನಿಮಾ ಎಂದರೆ ಅದು ರಚಿತಾ ಮತ್ತು ಉಪ್ಪಿ ಅಭಿನಯದ ಐ ಲವ್ ಯೂ ಸಿನಿಮಾ.. ಯಾವ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳದ ರೀತಿಯಲ್ಲಿ ರಚ್ಚು ಈ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.. ಇದು ಸಾಕಷ್ಟು ಸುದ್ದಿ ಕೂಡ ಮಾಡಿತ್ತು. ಹಾಗಾಗಿ ರಚಿತಾ ಕಣ್ಣೀರು ಕೂಡ ಹಾಕಿದ್ದುಂಟು..Sorry ಅಪ್ಪ, ತಪ್ಪು ಮಾಡಿಬಿಟ್ಟೆ, ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಟಿ ರಚಿತ ರಾಂಮ್ ಕಣ್ಣೀರು ಹಾಕಿದ್ದಾರೆ.
ಐಲವ್‌ಯು ಸಿನಿಮಾದಲ್ಲಿ ರಚಿತಾ ರಾಮ್ ಅವರು ನಟ ಉಪೇಂದ್ರ ಅವರೊಂದಿಗೆ ಹಾಟ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.ಸಿಕ್ಕಾಪಟ್ಟೆ ಹಸಿಬಿಸಿಯಾಗಿರುವ ರಚ್ಚು ಅನ್ನು ನೋಡಿದ ಪಡ್ಡೆ ಹುಡುಗರು ಸದ್ಯ ನಿದ್ದೆ ಕೆಡಿಸಿಕೊಂಡಿದ್ದುಂಟು. ಐ ಲವ್ ಯೂ ಸಿನಿಮಾದ ಈ ಹಾಡು ಸಾಕಷ್ಟು ವೈರಲ್ ಆಗಿದ್ದು ರಚಿತಾ ರಾಮ್ ಅವರ ಗ್ಲಾಮರ್ ಗೆ ಎಲ್ಲರೂ ಕೂಡ ಫಿದಾ ಆಗಿ ಹೋಗಿದ್ದಾರೆ.. ಇದೆಲ್ಲದರ ನಡುವೆ ಐಲವ್‌ಯು ಸಿನಿಮಾವನ್ನು ನೋಡಿದ ರಚಿತಾ ರಾಮ್ ಅವರ ಕುಟುಂಬ ಸಿನಿಮಾವನ್ನು ನೋಡಿ ಬೇಸರ ಮಾಡಿಕೊಂಡಿದ್ದಾರೆ.. ಅಪ್ಪ, ಅಮ್ಮನ ಬಳಿ ಕ್ಷಮೆಯನ್ನೂ ಕೂಡ ಕೇಳಿದ್ದೆ. ಇನ್ನೆಂದೂ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ರಚಿತಾ ರಾಮ್ ತಿಳಿಸಿದ್ದಾರೆ. ಈ ಸಿನಿಮಾದಿಂದ ರಚಿತ ಇಮೇಜ್ ಡ್ಯಾಮೇಜ್ ಆಗಿದೆ ಅನ್ನೋದು ಅನೇಕರ ಅಭಿಪ್ರಾಯವಾಗಿದೆ..
Comments