ಬಿಗ್ ಬಾಸ್ ಮನೆಯಿಂದಲೇ ಅರೆಸ್ಟ್ ಆದ ಸ್ಪರ್ಧಿ..!! ಯಾರ್ ಗೊತ್ತಾ..?
ಬಿಗ್ ಬಾಸ್ ಎಲ್ಲಾ ಭಾಷೆಗಳಲ್ಲಿಯೂ ಕೂಡ ಸೂಪರ್ ಡೂಪರ್ ಹಿಟ್ ಆಗಿವೆ...ಆದರೆ ಇದೀಗ ಬಿಗ್ ಬಾಸ್ ಸೆಟ್'ನಿಂದ ನೇರವಾಗಿ ಅಭ್ಯರ್ಥಿಯನ್ನು ಅರೆಸ್ಟ್ ಮಾಡಿರುವ ಘಟನೆ ನಡೆದಿದೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಬಿಗ್ ಬಾಸ್ ಸೆಟ್‍ನಿಂದಲೇ ನೇರವಾಗಿ ಸ್ಪರ್ಧಿಯನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆಯೊಂದು ಮರಾಠಿ ಬಿಗ್ ಬಾಸ್ ಎರಡನೇ ಅವೃತ್ತಿಯಲ್ಲಿ ನಡೆದಿದೆ.
ಮರಾಠಿ ಬಿಗ್‍ಬಾಸ್ ಸ್ಪರ್ಧಿಯಾದ ಅಭಿಜಿತ್ ಬಿಚುಕಲೆ ಅವರ ವಿರುದ್ಧ ಸತಾರಾ ಪೊಲೀಸ್ ಠಾಣೆಯಲ್ಲಿ ಚೆಕ್ ಬೌನ್ಸ್ ಪ್ರಕರಣವನ್ನು ದಾಖಲು ಮಾಡಲಾಗಿತ್ತು. ಈ ಪ್ರಕರಣದ ಹಿನ್ನಲೆಯಲ್ಲಿ ಇದೀಗ ಅವರನ್ನು ಬಂಧಿಸಲಾಗಿದೆ. ರಾಜಕೀಯ ಕಾರ್ಯಕರ್ತನಾಗಿರುವ ಅಭಿಜೆತ್ ಬಿಚುಕಲೆ ಅವರನ್ನು ರಾಜಕೀಯ ಕೋಟಾದ ಮೇಲೆ ಬಿಗ್‍ಬಾಸ್‍ಗೆ ಆಯ್ಕೆ ಮಾಡಲಾಗಿತ್ತು.ಇವರ ಮೇಲೆ 2015ದಿಂದ ಈ ಚೆಕ್ ಬೌನ್ಸ್ ಪ್ರಕರಣ ಕೋರ್ಟಿನಲ್ಲಿ ಇತ್ತು. ಈ ವಿಚಾರವಾಗಿ ಕೋರ್ಟ್ ಅಭಿಜಿತ್ ಅವರಿಗೇ ಎಷ್ಟು ಸಲ ಸಮನ್ಸ್ ಕಳುಹಿಸಿದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಅದ್ದರಿಂದ ಕೋರ್ಟ್ ಅವರ ಮೇಲೆ ವಾರೆಂಟ್ ಜಾರಿ ಮಾಡಿತ್ತು. ಈ ಕಾರಣದಿಂದ ಅವರು ಬಿಗ್ ಬಾಸ್ ಸ್ಪರ್ಧಿಯಾಗಿದ್ದರೂ ಅವರನ್ನು ಅಲ್ಲಿಂದಲೇ ನೇರವಾಗಿ ಬಂಧಿಸಿ ಕರೆದುಕೊಂಡು ಬರಲಾಗಿದೆ. ಅಭಿಜಿತ್ ರಾಜಕೀಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರೂ ಕೂಡ ಅಷ್ಟಾಗಿ ಗುರುತಿಸಿಕೊಂಡಿರಲಿಲ್ಲ..
Comments