ಸಮಂತಾ ಅಕ್ಕಿನೇನಿ ಈಗ ಬೇಬಿ ಸಮಂತಾ ಅಕ್ಕಿನೇನಿ ಅಂತೆ..!!

22 Jun 2019 10:53 AM | Entertainment
387 Report

ಮದುವೆಯ ನಂತರ ಸ್ಟಾರ್ಸ್ಗಳು ಸಿನಿಮಾದಿಂದ ದೂರ ಉಳಿಯುವುದೇ ಹೆಚ್ಚು.. ಆದರೆ ಕೆಲವು ನಟಿಯರು ಮಾತ್ರ ಮದುವೆಯ ನಂತರವೂ ಕೂಡ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯಿಸುತ್ತಿರುತ್ತಾರೆ..ಅದೇ ರೀತಿ ಮದುವೆಯ ನಂತರ ಸಮಂತಾ ಅಕ್ಕಿನೇನಿ ಬ್ಯಾಕ್​ ಟು ಬ್ಯಾಕ್ ಸಿನಿಮಾಗಳಲ್ಲಿ ಮಿಂಚುತ್ತಿದ್ದು, ಒಂದಕ್ಕಿಂತ ಒಂದು ಡಿಫ್​ರೆಂಟ್​ ರೋಲ್​ಗಳನ್ನ ಕಾಣಿಸಿಕೊಳ್ಳುತ್ತಿದ್ದಾರೆ... ಇದೀಗ ಓ ಬೇಬಿ.. ಎಂಬ ಸಿನಿಮಾದಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ. ಟಾಲಿವುಡ್​ ಚೆಲುವೆ ಸಮಂತಾ ಅಕ್ಕಿನೇನಿ ಅಭಿನಯದ ಹೊಸ ಸಿನಿಮಾ ಓ ಬೇಬಿ...

70 ವರ್ಷದ ಅಜ್ಜಿಯಯ ಜೀವನದಲ್ಲಿ ನಡೆದ ಒಂದು ಚಮತ್ಕಾರವೇ ಓ ಬೇಬಿ ಸಿನಿಮಾ ಕಥೆ.. ಫೋಟೋ ಸ್ಟುಡಿಯೋದಲ್ಲಿ ಅಜ್ಜಿ, ಫೋಟೋ ಹಿಡಿತ್ತಿದಂತೆ ಆಕೆ 24 ವರ್ಷದ ಯುವತಿಯಾಗಿ ಬದಲಾಗಿಬಿಡ್ತಾಳೆ..  70 ವರ್ಷದ ಅಜ್ಜಿ ಪಾತ್ರದಲ್ಲಿ ಜ್ಯೂಲಿ ಲಕ್ಷ್ಮೀ ಕಾಣಿಸಿಕೊಳ್ಳಲಿದ್ದು ಆಕೆ ಯುವತಿಯಾಗಿ ಬದಲಾದಾಗ ಸಮಂತಾ ಆ ಪಾತ್ರವನ್ನ ಮಾಡಲಿದ್ದಾರೆ. 70 ವರ್ಷದ ಅಜ್ಜಿ ಇದ್ದಕ್ಕಿದಂತೆ ಯುವತಿ ರೂಪಕ್ಕೆ ಬಂದರೆ ಏನೆಲ್ಲಾ ತಾಪತ್ರಯ ಆಗುತ್ತದೆ ಎಂಬುದು ಸಿನಿಮಾದ ಕಥಾವಸ್ತುವಾಗಿದೆ... ಈ ಸಿನಿಮಾ ಪೂರ್ತಿ ಸಮಂತಾ ಪಾತ್ರದ ಸುತ್ತಾ ಸುತ್ತುವಂತಿದ್ದು, ನಾಗಶೌರ್ಯ ನಾಯಕನಾಗಿ ಸಾಥ್ ಕೊಟ್ಟಿದ್ದಾರೆ.. ಹಿರಿಯ ನಟ ರಾಜೇಂದ್ರ ಪ್ರಸಾದ್, ರಾವು ರಮೇಶ್, ಊರ್ವಶಿ ‘ಓ ಬೇಬಿ’ ಚಿತ್ರದ ಪ್ರಧಾನ ಪಾತ್ರವರ್ಗದಲ್ಲಿದ್ದಾರೆ.. ಅಂದ ಹಾಗೆ 2014ರಲ್ಲಿ ಬಂದ ‘ಮಿಸ್ ಗ್ರಾನಿ’ ಅನ್ನೋ ಕೊರಿಯನ್ ಸಿನಿಮಾದಿಂದ ಇನ್​ಸ್ಪೈರ್ ಆಗಿ ಓ ಬೇಬಿ ಸಿನಿಮಾ ಮಾಡಲಾಗಿದೆ.. ಸಮಂತಾ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಸಖತ್ ಸದ್ದು ಮಾಡುತ್ತಿದೆ.

Edited By

Manjula M

Reported By

Manjula M

Comments