ರಚ್ಚು ಪ್ರಿಯಾಂಕ ಮದ್ಯೆ ಇದ್ದ ವಿವಾದಕ್ಕೆ ತೆರೆ ಎಳೆದ ರಿಯಲ್ ಸ್ಟಾರ್ ಉಪ್ಪಿ..!!

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಹಸಿಬಿಸಿ ಸುದ್ದಿಯಾಗುತ್ತಿರುವ ಸಿನಿಮಾವೆಂದರೆ ಅದು ಉಪೇಂದ್ರ ಮತ್ತು ರಚಿತಾರಾಮ್ ಅಭಿನಯದ ಐ ಲವ್ ಯೂ ಸಿನಿಮಾ,, ಈ ಸಿನಿಮಾದಿಂದ ರಚಿತಾ ರಾಮ್ ಒಂದಿಷ್ಟು ಗಾಸಿಪ್ ಗಳಿಗೆ ತಗುಲಿಹಾಕಿಕೊಂಡಿದ್ದು ನಿಜ,, ಡಿಂಪಲ್ ಕ್ವೀನ್ ರಚಿತಾ ರಾಮ್ ಐ ಲವ್ ಯು ಚಿತ್ರದ ಹಸಿಬಿಸಿ ದೃಶ್ಯಗಳನ್ನ ನೋಡಿ ಪ್ರಿಯಾಂಕಾ ಉಪೇಂದ್ರ ಗರಂ ಆಗಿದ್ದಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಗಿಯೇ ಸದ್ದು ಮಾಡಿತ್ತು.
ಐ ಲವ್ ಯು ಸಿನಿಮಾ ಇತ್ತೀಚೆಗೆ ತೆರೆಕಂಡು ಬಾಕ್ಸಾಫೀಸ್ ನಲ್ಲೂ ಕೂಡ ಸಖತ್ ಸದ್ದು ಮಾಡುತ್ತಿದೆ. ಆರ್ ಚಂದ್ರು ನಿರ್ದೇಶಿಸಿ ನಿರ್ಮಿಸಿರೋ ಈ ಸಿನಿಮಾದಲ್ಲಿ ರಚಿತಾ ಬೋಲ್ಡ್ ಅಂಡ್ ಬ್ಯೂಟಿಫುಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ರಚಿತಾ ರಾಮ್ ಅವರನ್ನು ಅಷ್ಟು ಬೋಲ್ಡ್ ಆಗಿ ಯಾವ ಸಿನಿಮಾದಲ್ಲಿಯೂ ಕೂಡ ಅಭಿಮಾನಿಗಳು ನೋಡಿರಲಿಲ್ಲ.. ಹಾಗಾಗಿ ಫಸ್ಟ್ ಟೈಮ್ ಹಾಟ್ ಲುಕ್ ನಲ್ಲಿ ರಚಿತಾ ಅವರನ್ನು ನೋಡಿದ ಪಡ್ಡೆ ಹುಡುಗರು ನಿದ್ದೆ ಇಲ್ಲದಂತೆ ಮಾಡಿಕೊಂಡರು.. ಹಸಿ ಬಿಸಿ ದೃಶ್ಯಗಳು ಪಡ್ಡೆ ಹುಡುಗರ ಜೊತೆ ಪ್ರಿಯಾಂಕಾ ಉಪೇಂದ್ರರನ್ನೂ ನಿದ್ದೆಗೆಡಿಸಿತ್ತು. ರಚಿತಾ ರಾಮ್ ಮೇಲೆ ಪ್ರಿಯಾಂಕ ಸಿಕ್ಕಾಪಟ್ಟೆ ಗರಂ ಆಗಿದ್ರು. ಆ ದೃಶ್ಯವನ್ನ ಉಪ್ಪಿನೇ ಡೈರೆಕ್ಟ್ ಮಾಡಿದ್ದಾರೆ ಅಂತ ಬಾಯಿಂದ ಬಾಯಿಗೆ ಹರಡುತ್ತಾ ಹೋದಂತೆ ಸಂದರ್ಶನವೊಂದರಲ್ಲಿ ರಚ್ಚು ಮೇಲೆ ಅಸಮಾಧಾನ ಹೊರಹಾಕಿದ್ರು ಪ್ರಿಯಾಂಕಾ ಉಪೇಂದ್ರ. ಆದರೆ ಪ್ರಿಯಾಂಕ ಉಪೇಂದ್ರ ಮತ್ತು ರಚಿತಾ ರಾಂ ವಿವಾದಕ್ಕೆ ಸದ್ಯ ಉಪೇಂದ್ರ ಅವರೇ ತೆರೆ ಎಳೆದಿದ್ದಾರೆ.. ಸದ್ಯ ಐ ಲವ್ ಯೂ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದಿದೆ.
Comments