ಪ್ರಿಯಾಂಕಾ ಚೋಪ್ರಾರ 'ಖಾಕಿ ಚಡ್ಡಿ' ಹಿಂದೆ ಬಿದ್ದ ನೆಟ್ಟಿಗರು..!!!
ಇತ್ತಿಚಿಗೆ ನಟ ನಟಿಯರು ಏನು ಮಾಡಿದರೂ ಟ್ರೋಲ್ ಆಗುವುದು ಕಾಮನ್ ಆಗಿ ಬಿಟ್ಟಿದೆ, ಅದರಲ್ಲೂ ಬಾಲಿವುಡ್ ಮಂದಿ ಮಾತ್ರ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾರೆ. ಭಾರತದಲ್ಲಿ ಹೆಚ್ಚು ಟ್ರೋಲ್ ಆಗುತ್ತಿರುವ ನಟಿ ಎಂದರೆ ಅವರೇ ಪ್ರಿಯಾಂಕ ಚೋಪ್ರಾ.. ಇತ್ತಿಚಿಗಂತೂ ಅವರು ಏನು ಮಾಡಿದರೂ ಕೂಡ ಟ್ರೋಲ್ ಆಗುತ್ತಿರುತ್ತಾರೆ, ಪ್ರಿಯಾಂಕಾ ಏನೇ ಮಾಡಿದರು ಅದರಲ್ಲಿ ತಪ್ಪು ಹುಡುಕಿ ನೆಟಿಗರು ಕುಹಕವಾಡುತ್ತಿದ್ದಾರೆ. ಇದೀಗ ಅವರ ಹಾಕಿಕೊಂಡಿರುವ ಖಾಕಿ ಚಡ್ಡಿ ಹಿಂದೆ ನೆಟಿಗರು ಬಿದ್ದಿದ್ದಾರೆ.
ನ್ಯೂಯಾರ್ಕ್ ನ ಅಪಾರ್ಟ್ ಮೆಂಟ್ ನಲ್ಲಿ ಪತಿ ನಿಕ್ ಜೋಸನ್ ಜೊತೆ ಪ್ರಿಯಾಂಕಾ ಚೋಪ್ರಾ ಹೊರ ಬಿದ್ದಾಗ ಅವರು ಹಾಕಿಕೊಂಡಿದ್ದ ಡಿಫರೆಂಟ್ ಡ್ರೆಸ್ ಇದೀಗ ಟ್ರೋಲಿಗರ ಬಾಯಿಗೆ ಆಹಾರ ಬಿಟ್ಟಿದಾಗಿದೆ.. ಪ್ರಿಯಾಂಕಾ ಕಪ್ಪು ಬಣ್ಣದ ಟಾಪ್ ಹಾಕಿಕೊಂಡು ಅದಕ್ಕೆ ಖಾಕಿ ಬಣ್ಣದ ಚಡ್ಡಿ ಹಾಕಿ ಕಪ್ಪು ಬಣ್ಣದ ಶೂ ಹಾಕಿಕೊಂಡಿದ್ದರು. ಇದನ್ನು ಟ್ರೋಲಿಗರು ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್ಎಸ್ಎಸ್) ಯೂನಿಫಾರ್ಮ್ ಗೆ ಹೋಲಿಸಿ ಪ್ರಿಯಾಂಕಾ ಚೋಪ್ರಾ ಅವರ ಕಾಲೆಳೆಯುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಆರ್ಎಸ್ಎಸ್ ನ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಟ್ರೋಲಿಗರ ಬಾಯಿಗೆ ಆಹಾರವಾಗಿ ಬಿಟ್ಟರೆ ಸಾಕು ಪದೇ ಪದೇ ಕಾಲೆಳೆಯುತ್ತಲೆ ಇರುತ್ತಾರೆ. ಪ್ರಿಯಾಂಕ ಚೋಪ್ರಾ ಅವರಿಗೆ ಆಗಿರುವ ಕೆಲಸವು ಕೂಡ ಅದೇ.
Comments