ಕೊಹ್ಲಿಯನ್ನು ಅಪ್ಪಿಕೊಂಡ 'ಮಿಸ್ಟರ್ ಐರಾವತ' ನಾಯಕಿ
ಭಾರತ ಮತ್ತು ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ಗೆದ್ದ ಖುಷಿಯಲ್ಲಿ ಭಾರತವಿದೆ… ಟೀಂ ಇಂಡಿಯಾವನ್ನು ಕೊಂಡಾಡಿದವರು ಅದೆಷ್ಟು ಜನವೋ… ಪಾಕಿಸ್ತಾನದ ಮೇಲೆ ಗೆದ್ದ ಮೇಲಂತೂ ಕೊಹ್ಲಿ ಮೇಲಿದ್ದ ಪ್ರೀತಿ ಇದೀಗ ಅಭಿಮಾನಿಗಳಿಗೆ ಮತ್ತಷ್ಟು ಹೆಚ್ಚಾಗಿದೆ. ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಮೇಲೆ ಟೀಮ್ ಇಂಡಿಯಾ ಕ್ಯಾಪ್ಟನ್ ಕೊಹ್ಲಿಯನ್ನು ನಟಿಯೊಬ್ಬರು ತಬ್ಬಿಕೊಂಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಸ್… ಕನ್ನಡದ 'ಮಿಸ್ಟರ್ ಐರಾವತ' ಚಿತ್ರದಲ್ಲಿ ಅಭಿನಯಿಸಿರುವ ನಟಿ ಊರ್ವಶಿ ರೌಟೇಲಾ ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡಿದ್ದಾರೆ.. ಆದರೆ ಕೊಹ್ಲಿಯನ್ನು ಹೀಗೆ ತಬ್ಬಿಕೊಂಡಿದ್ದಕ್ಕೆ ಪತ್ನಿ ಅನುಷ್ಕಾ ಸುಮ್ಮನಿದ್ರಾ ಅಂತಾ ಸಾಮಾನ್ಯವಾಗಿ ಎಲ್ಲರೂ ಕೇಳುವುದು ಸಹಜ.. ಆದರೆ ಊರ್ವಶಿ ರೌಟೇಲಾ ತಬ್ಬಿಕೊಂಡಿರುವುದು ವಿರಾಟ್ ಕೊಹ್ಲಿಯನ್ನಲ್ಲಾ ಬದಲಿಗೆ ಅವರ ಮೇಣದ ಪ್ರತಿಮೆಯನ್ನು ಎಂಬುದೇ ವಿಷಯ.. ಕೊಹ್ಲಿ ಮೇಣದ ಪ್ರತಿಮೆಯನ್ನು ಅಪ್ಪಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಊರ್ವಶಿ, ವಿರಾಟ್ ಕೊಹ್ಲಿಗೆ ಬೆಂಬಲ ನೀಡಲು ಈ ರೀತಿ ಪೋಸ್ಟ್ ಹಾಕಿರುವುದಾಗಿ ಬರೆದುಕೊಂಡಿದ್ದಾರೆ. ಇನ್ನು ನೆಟ್ಟಿಗರು ಈ ಫೋಟೋವನ್ನು ಅನುಷ್ಕಾಗೆ ಟ್ಯಾಗ್ ಮಾಡಿ ಕಮೆಂಟ್ ಕೂಡ ಮಾಡ್ತಿದ್ದಾರೆ. ಸದ್ಯ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನದ ವಿರುದ್ದ ಇಂಡಿಯಾ ಗೆದ್ದ ಸಂಭ್ರಮದಲ್ಲಿದ್ದಾರೆ.. ಈ ಬಾರಿ ವಿಶ್ವ ಕಫ್ ಯಾರ ಪಾಲಿಗೆ ದಕ್ಕುತ್ತದೆಯೋ ಎಂಬುದನ್ನು ಕಾದು ನೋಡ ಬೇಕಿದೆ.
Comments