ಡಿವೋರ್ಸ್ ಗೆ ಕೋರ್ಟ್ ಮೆಟ್ಟಿಲೇರಿದ ಮತ್ತೊಂದು ಸ್ಯಾಂಡಲ್ ವುಡ್ ಜೋಡಿ…!!

ಇತ್ತಿಚಿಗೆ ಸೆಲೆಬ್ರೆಟಿಗಳು ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿ ಕೋರ್ಟ್ ಮೆಟ್ಟಿಲೇರುವುದು ಕಾಮನ್ ಆಗುವುದು.. ಇದೀಗ ಖ್ಯಾತ ಗಾಯಕ ರಘು ದೀಕ್ಷಿತ್ ಹಾಗೂ ಡ್ಯಾನ್ಸರ್ ಮಯೂರಿ ಪರಸ್ಪರ ಒಪ್ಪಿಗೆಯನ್ನು ತೆಗೆದುಕೊಂಡು ವಿಚ್ಛೇದನ ಪಡೆಯುವುದಕ್ಕೆ ನಿರ್ಧಾರ ಮಾಡಿದ್ದಾರೆ... ಕಳೆದ ಒಂದು ವರ್ಷದಿಂದ ರಘು ಮತ್ತು ಮಯೂರಿ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದರು..
ಎಸ್… ಇದೀಗ ರಘು ಮತ್ತು ಮಯೂರಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇಧನ ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ.. ಕೆಲವು ತಿಂಗಳುಗಳ ಹಿಂದೆ ರಘು ದೀಕ್ಷಿತ್ ಮೇಲೆ ಮೀಟೂ ಆರೋಪ ಕೇಳಿ ಬಂದಿತ್ತು.. ಆಗಿನಿಂದಲೂ ಕೂಡ ಇಬ್ಬರಲ್ಲಿಯೂ ಕೂಡ ಮನಸ್ತಾಪ ಉಂಟಾಗಿತ್ತು....ಇದೀಗ ಜೋಡಿ ಬೇರೆಯಾಗುತ್ತಿರುವುದ ಖಚಿತವಾಗಿದೆ.. ಸದ್ಯಕ್ಕೆ ನ್ಯಾಯಾಲಯ ದಂಪತಿಗೆ 6 ತಿಂಗಳ ಗಡುವು ನೀಡಿದ್ದು, ಡಿಸೆಂಬರ್ ನಲ್ಲಿ ವಿಚಾರಣೆ ನಡೆಸುವುದಾಗಿ ಹೇಳಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಗಾಯಕಿ ಚಿನ್ಮಯಿ ಶ್ರೀಪಾದ ಅವರು ರಘು ದೀಕ್ಷಿತ್ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಚಿನ್ಮಯ್ ತನ್ನ ಸ್ನೇಹಿತರಿಗೆ ಆದ ಅನುಭವಗಳನ್ನು 2 ಪತ್ರಗಳ ಮೂಲಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದರಿಂದ ಬೇಸರಗೊಂಡು ಮಯೂರಿ ಡೈವೋರ್ಸ್ ತೆಗೆದುಕೊಳ್ಳಲು ಮುಂದಾಗಿದ್ದಾರೆ.
Comments