ಬಾಲಿವುಡ್ ಗೆ ಹಾರಿದ ಅನುಪಮಾ ಗೌಡ..!

12 Jun 2019 11:24 AM | Entertainment
531 Report

ಸ್ಯಾಂಡಲ್ ವುಡ್ ನ ನಟಿ ಮಣಿಯರು ಪರಭಾಷೆಯಲ್ಲಿ ಈಗಾಗಲೇ ಮಿಂಚಿದ್ದಾರೆ… ಇದೀಗ ಅನುಪಮಾಗೌಡ ಸರದಿ.. ಬಿಗ್ ಬಾಸ್ 5 ರಲ್ಲಿ ಮಿಂಚಿದ್ದ ಅನುಪಮಾ ಇದೀಗ ಬಾಲಿವುಡ್ ಗೆ ಹಾರಲಿದ್ದಾರೆ… ಅನುಪಮಾ ಗೆ ಹಿಂದಿ ಚಿತ್ರದಲ್ಲಿ ನಟಿಸುವ ಆಫರ್ ಬಂದಿದೆ. ಅಕ್ಕ ಧಾರವಾಹಿಯ ಮೂಲಕ ಅನುಪಮಾ ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು.. ಕನ್ನಡದ ಚಿತ್ರಗಳಲ್ಲಿ ಹಾಗೂ ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ನಟಿ ಅನುಪಮಾ ಸದ್ಯ ಹಿಂದಿ ಭಾಷೆಯ ಕಿರುಚಿತ್ರವೊಂದರಲ್ಲಿ ಬಣ್ಣ ಹಚ್ಚಲಿದ್ದಾರಂತೆ.

ಇನ್ನೂ ಈ ಕಿರು ಚಿತ್ರವನ್ನು ಸ್ಯಾಂಡಲ್ ವುಡ್ ಊರ್ವಿ ಸಿನಿಮಾದ ಖ್ಯಾತ ನಿರ್ದೇಶಕರಾದ ಪ್ರದೀಪ್ ವರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ದಿ ಫಾಲನ್ ಎಂಬ ಟೈಟಲ್ ಫಿಕ್ಸ್ ಆಗಿದೆಯಂತೆ.. ಈ ಶಾರ್ಟ್​ ಮೂವಿ ಕಥೆಯು ಸುಮಾರು 4 ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.. ಸದ್ಯ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಕಿರುಚಿತ್ರಕ್ಕೆ ಬೇಕಾದ ಫೋಟೋ ಶೂಟ್ ಮಾಡಿಸುವ ಯೋಚನೆಯಲ್ಲಿ ಅನುಪಮ ಇದ್ದಾರೆ ಎಂದು ಹೇಳಲಾಗುತ್ತಿದೆ.. ದಿ ಫಾಲನ್ ಶಾರ್ಟ್​ ಮೂವಿಯನ್ನು ಲದಾಕ್, ಮನಾಲಿ ಸುತ್ತಮುತ್ತ ಚಿತ್ರ ತಂಡ ಫೋಟೋ ಶೂಟ್ ಮಾಡಲು ಸಿದ್ದತೆ ನಡೆಸುತ್ತಿದ್ದು, ಸುಮಾರು 30 ದಿನಗಳ ಕಾಲ ಚಿತ್ರದ ಶೂಟಿಂಗ್ ಗೆ ಚಿತ್ರತಂಡ ತಯಾರಿ ನಡೆಸುತ್ತಿದೆ. ಅಂತು ಇಂತೂ ಅನುಪಮಾ ಲಕ್ ಖುಲಾಯಿಸಿದ ಆಗೆ ಇದೆ.. ಯಾವ ರೀತಿ ಅನುಪಮಾ ಗೆ ಈ ಸಿನಿಮಾ ಬ್ರೇಕ್ ತಂದು ಕೊಡಬೇಕಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Edited By

Manjula M

Reported By

Manjula M

Comments