ಸಮಂತಾ ಅಕ್ಕಿನೇನಿ ಗರ್ಭಿಣಿಯಾ..!!
ಸೆಲಬ್ರೆಟಿಗಳು ಇತ್ತಿಚಿಗಂತೂ ಒಂದಲ್ಲ ಒಂದು ವಿಷಯಕ್ಕೆ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇದೀಗ ಸಮಂತಾ ಸರದಿ ಅನ್ನಿಸುತ್ತಿದೆ.. ಸಮಂತ ಅಕ್ಕಿನೇನಿ ಇದೀಗ ಸೋಷಿಯಲ್ ಮಿಡೀಯಾದಲ್ಲಿ ಬಾರೀ ಸುದ್ದಿಯಲ್ಲಿದ್ದಾರೆ.. ನಟಿ ಸಮಂತಾ ಗರ್ಭಿಣಿಯಾ ಎಂದು ಪ್ರಶ್ನಿಸಿ ತೆಲುಗು ವೈಬ್‍ಸೈಟ್‍ವೊಂದು ನಟಿಯ ಟ್ವಿಟ್ಟರಿಗೆ ಟ್ಯಾಗ್ ಮಾಡಿತ್ತು. ಈ ಪ್ರಶ್ನೆಗೆ ನಟಿ ಸಮಂತಾ ಅಕ್ಕಿನೇನಿ ಹಾಸ್ಯಾಸ್ಪದವಾಗಿ ಪ್ರತಿಕ್ರಿಯೆ ನೀಡಿದ್ದಾರೆ..
ತೆಲುಗು ವೆಬ್‍ಸೈಟ್, ಸಮಂತಾ ಗರ್ಭಿಣಿಯಾ ಎಂದು ಪ್ರಶ್ನಿಸಿ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿತ್ತು. ಈ ಟ್ವೀಟ್‍ಗೆ ಸಮಂತಾ, ನಿಜವಾಗಿಯೂ ಹೌದಾ? ನಿಮಗೆ ಗೊತ್ತಾದರೆ ದಯವಿಟ್ಟು ನನಗೆ ತಿಳಿಸಿ ಎಂದು ಹಾಸ್ಯವಾಗಿ ರೀ-ಟ್ವೀಟ್ ಮಾಡಿದ್ದಾರೆ. ಸಮಂತಾ ಅವರು 2017, ಅಕ್ಟೋಬರ್ ತಿಂಗಳಲ್ಲಿ ನಟ ನಾಗಚೈತನ್ಯ ಅವರ ಜೊತೆ ಗೋವಾದಲ್ಲಿ ವಿವಾಹವಾಗಿದ್ದರು. . ಮೊದಲು ಇಬ್ಬರು ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ನಂತರ ಕ್ರೈಸ್ತ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಒಟ್ಟಾರೆಯಾಗಿ ನಟನಟಿಯರು ಸುಮ್ ಸುಮ್ಮನೆ ಗಾಸಿಪ್ ಗೆ ಒಳಗಾಗುವುದು ಕಾಮನ್ ಆಗಿಬಿಟ್ಟಿದೆ. ಸದ್ಯ ಸಮಂತ ಸರದಿ ಮುಗಿದಿದೆ ಮುಂದೆ ಯಾರು ಗಾಸಿಪ್ ಗೆ ಆಹಾರ ಆಗುತ್ತಾರೋ ಅದನ್ನ ಕಾದು ನೋಡಬೇಕಿದೆ.. ಈ ಹಿಂದೆಯೂ ಸಾಕಷ್ಟು ನಟಿಮಣಿಯರು ಗರ್ಭಿಣಿ ಎಂಬ ವದಂತಿ ಹರಿದಾಡುತ್ತಿತ್ತು..ಅದಕ್ಕೆಲ್ಲಾ ನಟಿ ಮಣಿಯರು ರಿಯಾಕ್ಟ್ ಮಾಡಿದ್ದರು.. ಸಮಂತ ಕೂಡ ನಗು ನಗುತ್ತಲೆ ರಿಯಾಕ್ಟ್ ಮಾಡಿದ್ದಾರೆ.
Comments