ದರ್ಶನ್ ಮನೆ ಮುಂದೆ ಮರ ಬಿದ್ದು ಮೂರು ದಿನವಾದ್ರು ತೆರವುಗೊಳಿಸದ ಬಿಬಿಎಂಪಿ..!! ಕಾರಣ ಏನಿರಬಹುದು..?

ಬೆಂಗಳೂರಿನಲ್ಲಿ ಒಮ್ಮೆ ಜೋರಾಗಿ ಮಳೆ ಬಂದರೆ ಎಷ್ಟೆಲ್ಲಾ ಅನಾಹುತಗಳಾಗುತ್ತವೆ ಎಂಬುದು ಎಲ್ಲರಿಗೂ ಕೂಡ ತಿಳಿದಿದೆ. ಮರಗಳಂತೂ ರಸ್ತೆಯ ಮಧ್ಯೆಯಲ್ಲಿಯೇ ಮುರಿದು ಬೀಳುತ್ತವೆ… ಚರಂಡಿ ನೀರು ರಸ್ತೆ ಮಧ್ಯೆ ಹರಿಯುತ್ತದೆ.. ಹೀಗಿರುವಾಗ ಕಳೆದ ಮೂರು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಂದ ಧಾರಾಕಾರ ಮಳೆಗೆ ಸಾಕಷ್ಟು ಮರಗಳು ಧರೆಗುರುಳಿವೆ.. ರಾಜರಾಜೇಶ್ವರಿ ನಗರದಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮುಂದೆ ಕೂಡ ದೊಡ್ಡ ಮರವೊಂದು ಬಿದ್ದಿದೆ.
ಸದ್ಯ ಮನೆಯಿಂದ ಸ್ವಲ ದೂರ ಕಾಂಪೌಂಡ್ ಮೇಲೆ ಮರ ಬಿದ್ದಿರುವುದರಿಂದ ಮನೆಗೆ ಯಾವುದೇ ಹಾನಿಯಾಗಿಲ್ಲ… ಮರ ಬಿದ್ದು ಮೂರು ದಿನವಾದರೂ ಕೂಡ ಬಿಬಿಎಂಪಿಯವರು ಮರವನ್ನು ತೆರವುಗೊಳಿಸಿಲ್ಲ… ಬೇರೆ ಕಡೆ ಮರ ಬಿದ್ದರೆ ಕೆಲವೇ ಕ್ಷಣಗಳಲ್ಲಿ ತೆರವುಗೊಳಿಸುತ್ತಾರೆ.. ಆದರೆ ದರ್ಶನ್ ಮನೆ ಮುಂದೆ ಬಿದ್ದಿರುವ ಮರವನ್ನು ತೆರೆವುಗೊಳಿಸದೆ ಹಾಗೆ ಬಿಟ್ಟಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ರಾಜಕೀಯ ಉದ್ದೇಶ ಏನಾದ್ರು ಇದಿಯಾ ಎನ್ನುವ ಅನುಮಾನ ಅನೇಕರನ್ನು ಕಾಡುತ್ತಿದೆ.. ಮರ ಬಿದ್ದಿರುವುದರಿಂದ ಮನೆಯಿಂದ ಓಡಾಡಲು, ಕಾರು ಹೊರ ತೆಗೆಯಲು, ಸಾಧ್ಯವಾಗುತ್ತಿಲ್ಲವಂತೆ.. ಬಿದ್ದಿರುವ ಮರವನ್ನು ತೆರವುಗೊಳಿಸಲು ಇನ್ನೂ ಎಷ್ಟು ದಿನ ಬೇಕು ಎಂಬ ಮಾತನ್ನು ಅಭಿಮಾನಿಗಳು ಕೇಳುತ್ತಿದ್ದಾರೆ.
Comments