ಈ ಬಾರಿಯ ಬಿಗ್’ಬಾಸ್ ಗೆ ಇವರೆಲ್ಲಾ ಬರ್ತಾರಂತೆ..!! ಯಾರ್ಯಾರು ಗೊತ್ತಾ..?
ಕಿರುತೆರೆಯ ಬಿಗ್ ರಿಯಾಲಿಟಿ ಷೋ ಗಳಲ್ಲಿ ಜನಮನ ಗೆದ್ದ ಷೋ ಎಂದರೆ ಅದು ಬಿಗ್ ಬಾಸ್.. ಈಗಾಗಲೇ ಆರು ಆವೃತ್ತಿಗಳನ್ನು ಸಂಪೂರ್ಣವಾಗಿ ಮುಗಿಸಿರುವ ಈ ಷೋ ಏಳನೇ ಆವೃತ್ತಿಯನ್ನು ಶುರುಮಾಡುವ ಯೋಚನೆಯಲ್ಲಿದೆ ಆದರೇ ಈ ಕಾರ್ಯಕ್ರಮ ಆರಂಭವಾಗಲೂ ತುಂಬಾ ಕಾಲಾವಕಾಶ ಬೇಕು… ಆದರೆ ಈಗಾಗಲೇ ಆ ಷೋ ಗೆ ಯಾರೆಲ್ಲ ಬರಬಹುದು ಎಂಬ ಚರ್ಚೆ ಪ್ರಾರಂಭವಾಗಿ ಬಿಟ್ಟಿದೆ… ಸ್ಪರ್ಧಿಗಳ ಬಗ್ಗೆ ಚರ್ಚೆ, ಕುತೂಹಲ ಶುರುವಾಗಿದೆ.
ಬಿಗ್ ಬಾಸ್ ನ 7 ನೇ ಆವೃತ್ತಿಯ ಮನೆಯೊಳಗೆ ಯಾರೆಲ್ಲ ಹೋಗಬಹುದು ಎಂಬ ಚರ್ಚೆ ಸೋಷಿಯಲ್ ಮಿಡೀಯಾದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ… ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ವೀಕ್ಷಕರು ಇವರನ್ನು ನೋಡಲು ಬಯಸುತ್ತಾರಂತೆ… ಲೋಕಸಭಾ ಅಖಾಡದಲ್ಲಿ ಹೆಚ್ಚು ಸದ್ದು ಮಾಡಿದ್ದ ನಿಖಿಲ್ ಅವರನ್ನು ಬಿಗ್ ಬಾಸ್ ಮನೆಯಲ್ಲಿ ನೋಡಲು ವೀಕ್ಷಕರು ಬಯಸುತ್ತಾರಂತೆ.. ಇನ್ನೂ ಪತ್ರಕರ್ತೆ ರಾಧ ಹಿರೇಗೌಡರ್ ಅವರ ಹೆಸರು ಕೂಡ ಕೇಳಿ ಬರುತ್ತಿದೆ.. ಕುರಿ ಪ್ರತಾಪ್, ಕಾಮಿಡಿಯಲ್ಲಿ ಹೆಸರು ಮಾಡಿರುವ ಚಿಕ್ಕಣ್ಣ, ಮಂಡ್ಯ ರಮೇಶ್, ಸುಮನ್ ರಂಗನಾಥ್, ಶಂಕರ್ ಅಶ್ವಥ್, ಶೃತಿ ಮಗಳು ಗೌರಿ, ಆರ್ಯವರ್ಧನ್ ಗುರೂಜಿ, ವಿನಯಪ್ರಸಾದ್, ನಾರಾಯಣ ಗೌಡ, ರಂಗಾಯಣರಘು, ದರ್ಶನ್ ಪುಟ್ಟಣ್ಯಯ್ಯ, ಕವಿತಾ ಲಂಕೇಶ್ ಅವರನ್ನು ನೋಡಲು ಬಯಸುತ್ತಿದ್ದಾರಂತೆ.. ಒಟ್ಟಾರೆಯಾಗಿ ಈ ಬಾರಿಯ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲಾ ಬರ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ..
Comments