ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಈ ಸ್ಟಾರ್ ನಟರು..? ಯಾರ್ಯಾರು ಗೊತ್ತಾ..?
ರಾಜಕೀಯ ಎನ್ನುವುದು ಒಂದು ರೀತಿಯ ಮಹಾಯುದ್ದ ಇದ್ದ ಆಗೆ.. ರಾಜಕೀಯದಲ್ಲಿ ಬದುಕು ಕಟ್ಟಿಕೊಳ್ಳುವುದು ಸ್ವಲ್ಪ ಕಷ್ಟವೇ.. ಸಿನಿಮಾ, ಕ್ರಿಕೆಟ್ ರಾಜಕೀಯಕ್ಕೂ ಒಂದು ರೀತಿಯ ಕನೆಕ್ಷನ್ ಇರುತ್ತದೆ.. ಈಗಾಗಲೇ ಅನೇಕ ಕ್ರಿಕೆಟಿಗರು, ಸಿನಿಮಾದವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ… ರಾಜಕೀಯ ಅಂದ್ರೆ ಸುಮ್ಮನೆ ಅಲ್ಲ ಅದರಲ್ಲಿ ಪರಿಣಿತಿ ಇರಬೇಕು, ಮುಂದಾಲೋಚನೆ ಇರಬೇಕು… ಇನ್ನೂ ಮುಂದೆ ಸ್ಯಾಂಡಲ್ ವುಡ್ ನ ಈ ಸ್ಟಾರ್ ನಟರು ರಾಜಕೀಯಕ್ಕೆ ಎಂಟ್ರಿ ಕೊಟ್ಟರು ಆಶ್ಚರ್ಯ ಪಡಬೇಕಿಲ್ಲ..
ಮಂಡ್ಯದಲ್ಲಿ ಸುಮಲತಾ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಪ್ರಚಾರ ಮಾಡಿದ್ದರು.. ಅದೇ ರೀತಿ ಸುಮಲತಾ ಭರ್ಜರಿ ಗೆಲುವನ್ನು ಕಂಡರು.. ಹೀಗಾಗಿ ರಾಜಕೀಯದಲ್ಲಿ ಯಶ್ ಮತ್ತೆ ದರ್ಶನ್ ಗೆ ಉಜ್ವಲ ಭವಿಷ್ಯವಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.. ಈಗಾಗಲೇ ಇಬ್ಬರು ಸಮಾಜಸೇವೆಗಳನ್ನು ಮಾಡುತ್ತಿದ್ದಾರೆ.. ಮಂಡ್ಯದಲ್ಲಿ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ದರ್ಶನ್ ಮತ್ತು ಯಶ್ ಮುಂದೆ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡರು ಆಶ್ಚರ್ಯವೇನಿಲ್ಲ.. ಸುದೀಪ್ ಇವರಿಗೂ ಕೂಡ ಅಭಿಮಾನಿ ಬಳಗ ಹೆಚ್ಚಾಗಿಯೇ ಇದೆ.. ಇವರಿಗೆ ವಾಕ್ ಚಾತುರ್ಯ ಚೆನ್ನಾಗಿ ಇದೆ.. ಈಗಾಗಲೇ ರಾಜಕೀಯ ಪಕ್ಷದ ಬಗ್ಗೆ ಪ್ರಚಾರ ಮಾಡಿರುವ ಕಿಚ್ಚ ರಾಜಕೀಯಕ್ಕೆ ಎಂಟ್ರಿ ಕೊಟ್ಟರು ಕೊಡಬಹುದು.. ತುಪ್ಪದ ಹುಡುಗಿ ರಾಗಿಣಿ ಅವರು ಸಕ್ರಿಯ ರಾಜಕಾರಣಕ್ಕೆ ಬರುವ ಸಾಧ್ಯತೆ ಹೆಚ್ಚಿದೆ.. ಅವರೂ ಸಹ ಚುನಾವಣೆ ಪ್ರಚಾರಗಳಲ್ಲಿ ಭಾಗವಹಿಸಿದ್ದಾರೆ. ರಾಜಕೀಯ ಮಹಾತ್ವಾಕಾಂಕ್ಷಿ ಹೊಂದಿರುವ ಅವರು ರಾಜಕೀಯ ಪ್ರವೇಶ ಮಾಡುವುದು ಬಹುತೇಕ ಸ್ಪಷ್ಟ. ಈಗಾಗಲೇ ಸಾಕಷ್ಟು ನಟ ನಟಿಯರು ರಾಜಕೀಯದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.
Comments