ಪ್ರೀತಿಯಲ್ಲಿ ಬಿದ್ಳಾ ಕಿರಿಕ್ ಬೆಡಗಿ…!! ಹುಡುಗ ಯಾರ್ ಗೊತ್ತಾ..?

ಸ್ಯಾಂಡಲ್ ವುಡ್ ಗೆ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಎಂಟ್ರಿ ಕೊಟ್ಟವರಲ್ಲಿ ಸಂಯುಕ್ತಾ ಹೆಗ್ಡೆ ಕೂಡ ಒಬ್ಬರು.. ಈಕೆಯ ಸುತ್ತಾ ಯಾವಾಗಲೂ ಕೂಡ ವಿವಾದಗಳೂ ಸುತ್ತುತ್ತಲೇ ಇರುತ್ತವೆ.. ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಕಿರಿಕ್ ಹುಡುಗಿ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಚಂದನವನದಲ್ಲಿ ಮಾಡಿದ್ದು ಎರಡೇ ಸಿನಿಮಾವಾದ್ರೂ ಕೂಡ ಕಾಂಟ್ರೋವರ್ಸಿಗಳಿಗೇನು ಕಡಿಮೆ ಇಲ್ಲ… ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ.
ಪ್ರೀತಿ ವಿಷಯಕ್ಕೆ ಸುದ್ದಿಯಾಗಿರೋ ಸಂಯುಕ್ತಾ ಹೆಗ್ಡೆ ಯುರೋಪ್ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಿರೋ ಮೆಸೇಜ್ ನೀಡಿದ್ದಾರೆ. ಎಸ್… ಇತ್ತೀಚಿಗೆ ಕಿರಿಕ್ ಬೆಡಗಿ ಹೆಚ್ಚಾಗಿ ವಿದೇಶದಲ್ಲಿ ಓಡಾಡುತ್ತಿದ್ದಾರೆ. ಆದರೆ ಇದೀಗ ವಿದೇಶಿ ಹುಡುಗನ ಜೊತೆ ಇರುವ ಪೋಟೋವನ್ನ ತನ್ನಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಸಂಯುಕ್ತಾ, ಚಾಕಲೇಟ್ ಹಾಗೂ ವೆನಿಲಾ ಒಟ್ಟಿಗಿದ್ರೆ ಚೆನ್ನಾಗಿರುತ್ತದೆ ಅಂತಾ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಆ ವಿದೇಶಿ ಯುವಕ ಯಾರು ಎಂಬುದನ್ನ ಮಾತ್ರ ಸಂಯುಕ್ತಾ ತಿಳಿಸಿಲ್ಲ.. ಆದರೆ ಸದ್ಯ ಯರೋಪ್ ನಲ್ಲಿ ಆ ಹುಡುಗನೊಂದಿಗೆ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿರೋ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಸಂಯುಕ್ತಳಿಗೆ ಕೆಲವರು ಆಲ್ ದಿ ಬೆಸ್ಟ್ ಹೇಳಿದ್ರೆ, ಮತ್ತೆ ಕೆಲವರು ನೆಗಿಟಿವ್ ಕಮೆಂಟ್ ಮಾಡಿ ಕಾಲೆಳೆದಿದ್ದಾರೆ. ಒಟ್ಟಾರೆಯಾಗಿ ಸಂಯುಕ್ತ ಸಿನಿಮಾಕ್ಕಿಂತ ಹೆಚ್ಚಾಗಿ ಕಾಂಟ್ರೊವರ್ಸಿಗಳಿಂದನೇ ಸುದ್ದಿಯಾಗುತ್ತಿದ್ದಾರೆ.
Comments