ಮತ್ತೆ ಸುದ್ದಿಯಾದ ಮೀಟೂ ಅಭಿಯಾನದ ರೂವಾರಿ ಶೃತಿ ಹರಿಹರನ್..!!

ಕಳೆದ ವರ್ಷ ಸ್ಯಾಂಡಲ್ ವುಡ್ ಮೀಟೂ ಆರೋಪಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.. ಸ್ಯಾಂಡಲ್ ವುಡ್ ನಲ್ಲಿ ಮೀಟೂ ಆರೋಪ ಒಂದು ರೀತಿಯ ಸಂಚಲವನ್ನು ಮೂಡಿಸಿತ್ತು.. ಮೀಟೂ ಆರೋಪ ಸುದ್ದಿಯಾದಷ್ಟು ಶೃತಿ ಹರಿಹರನ್ ಕೂಡ ಸುದ್ದಿಯಾದರು… ಅರ್ಜುನ್ ಸರ್ಜಾ ಮೇಲೆ ಹಾಕಿದ ದೂರಿನಿಂದಾಗಿ ಶೃತಿ ಸಖತ್ ಸುದ್ದಿಯಾದರು.. ಆಗಿನಿಂದ ಸಿನಿಮಾದಿಂದ ಸ್ವಲ್ಪ ದೂರವೇ ಇಳಿದಿದ್ದಾರೆ.. ಇದೀಗ ಶೃತಿ ಮತ್ತೆ ಸುದ್ದಿಯಲ್ಲಿದ್ದಾರೆ.
ಎಸ್…ಚಂದನವನದಲ್ಲಿ ಸಂಚಲನ ಮೂಡಿಸಿದ್ದ ಮೀಟೂ ಆರೋಪದ ರೂವಾರಿ ಶ್ರುತಿ ಹರಿಹರನ್ ಅವರು ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮೀಟೂ ಅಭಿಯಾನದ ನಂತರ ಶ್ರುತಿ ಹಾಗೂ ರಾಮ್ಕುಮಾರ್ ವಿವಾಹವಾಗಿರುವ ವಿವಯ ತಿಳಿಯಿತು.. ಮೀಟೂ ಅಭಿಯಾನದ ನಂತರ ವಿದ್ಯಾಭ್ಯಾಸದ ನೆಪ ಹೇಳಿ ನ್ಯೂಯಾರ್ಕನಲ್ಲಿರುವ ಶ್ರುತಿ ಹರಿಹರನ್ ವಿದ್ಯಾಭ್ಯಾಸದ ಜೊತೆಗೆ ತಾಯ್ತನದ ಸಂಭ್ರಮದಲ್ಲಿದ್ದಾರಂತೆ. ಅಷ್ಟೆ ಅಲ್ಲದೇ ಒಂದು ವರ್ಷದ ನಿರ್ದೇಶನ ಕೋರ್ಸ್ಗಾಗಿ ನ್ಯೂಯಾರ್ಕ್ಗೆ ಹೋಗಿರುವ ಶ್ರುತಿ ಅಲ್ಲಿಯೇ ತಾಯಾಗಲಿದ್ದಾರೆ ಎನ್ನಲಾಗಿದೆ. ವಿಸ್ಮಯ ಸಿನಿಮಾದ ಹಿನ್ನಲೆಯಲ್ಲಿ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪ ಮಾಡಿದ್ದರು. ಇದೀಗ ಆ ಕೇಸು ನ್ಯಾಯಾಲಯದಲ್ಲಿದೆ.
Comments