ನಿರ್ದೇಶಕನ ಮೇಲೆ ಮೀಟೂ ಆರೋಪ ಮಾಡಿದ ನಟಿ..!!

ಸಿನಿಮಾರಂಗದಲ್ಲಿ ಕಳೆದ ವರ್ಷದಲ್ಲಿ ಮೀಟೂ ಆರೊಪ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.. ಸಾಕಷ್ಟು ನಟಿ ಮಣಿಯರು ತಮಗಾದ ಅನ್ಯಾಯವನ್ನು ಮೀಟೂ ಮೂಲಕ ಹೊರಹಾಕುತ್ತಿದ್ದರು…ಹಾಲಿವುಡ್, ಬಾಲಿವುಡ್, ಸ್ಯಾಂಡಲ್ವುಡ್ ಸೇರಿದಂತೆ ಎಲ್ಲ ಚಿತ್ರರಂಗದಲ್ಲೂ ಮೀಟೂ ಅಭಿಯಾನ ಹಿಂದಿನ ವರ್ಷ ಚುರುಕು ಪಡೆದಿತ್ತು.. ಈಗಲೂ ಕೆಲ ನಟಿಯರು ತಮ್ಮ ಮೇಲಾದ ಲೈಂಗಿಕ ಶೋಷಣೆಯನ್ನು ಹೊರ ಹಾಕ್ತಿದ್ದಾರೆ.. ನಟಿಯೊಬ್ಬಳು ಸಿಡಿಸಿರುವ ಬಾಂಬ್ ತಮಿಳು ಚಿತ್ರರಂಗದಲ್ಲಿ ಸುದ್ದಿಯಾಗ್ತಿದೆ..
ತಮಿಳು ಚಿತ್ರ ರಂಗದ ಯುವ ನಟಿ ಶಾಲು ಶಾಮು ಇದೀಗ ಮೀಟೂ ಆರೋಪವನ್ನು ಮುಂದಿಟ್ಟಿದ್ಧಾರೆ ಖ್ಯಾತ ನಿರ್ದೇಶಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ ನಟಿ ಶಾಲು.. ಈ ನಿರ್ದೇಶಕ ನನ್ನ ಜೊತೆ ಹಾಸಿಗೆ ಹಂಚಿಕೊಂಡರೆ ವಿಜಯ ದೇವರಕೊಂಡ ಚಿತ್ರದಲ್ಲಿ ಅಭಿನಯಿಸಲು ಅವಕಾಶವನ್ನು ನೀಡುತ್ತೇನೆ ಎಂದು ನಿರ್ದೇಶಕರು ಹೇಳಿದ್ದರಂತೆ. ಇನ್ಸ್ಟ್ರಾಗ್ರಾಮ್ ನಲ್ಲಿ ಶಾಲು ಶಾಮು ಈ ವಿಷಯವನ್ನು ಹಂಚಿಕೊಂಡಿದ್ದಾರೆ. ನಿರ್ದೇಶಕರ ಹೆಸರು ಹೇಳದ ಶಾಲು, ಇಂಥ ವಿಷ್ಯಗಳಿಂದ ಹೊರಬರುವುದು ನನಗೆ ಗೊತ್ತಿತ್ತು. ಹಾಗಾಗಿ ಪಾರಾದೆ ಎಂದು ತಿಳಿಸಿದ್ದಾರೆ…ಶಾಲು ಶಾಮು, ದಶಾವತಾರಂ ಚಿತ್ರದ ಮೂಲಕ ಚಿತ್ರರಂಗಕ್ಕೆಎಂಟ್ರಿ ಕೊಟ್ಟರು.. . ನಟ ಶಿವಕಾರ್ತಿಕೇಯನ್ ಜೊತೆ ಮಿಸ್ಟರ್ ಲೋಕಲ್ ನಲ್ಲಿ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದಾರೆ... 2008 ರಿಂದ 2012 ರವರೆಗೆ ಅನೇಕ ಚಿತ್ರಗಳಲ್ಲಿ ಶಾಲು ಶಾಮು ಅಭಿನಯಿಸಿದ್ದಾರೆ… ಒಟ್ಟಾರೆಯಾಗಿ ಮೀಟೂ ಆರೋಪ ಆಗಿಂದಾಗೆ ಸದ್ದು ಮಾಡುತ್ತಾ, ಸುದ್ದಿ ಮಾಡುತ್ತಿದೆ.
Comments