ಬ್ಯಾಚುಲರ್ ಲೈಫ್ ಗೆ ಗುಡ್ ಬಾಯ್ ಹೇಳಿದ ಸುಮನ್ ರಂಗನಾಥ್

ಸ್ಯಾಂಡಲ್ ವುಡ್ ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದಿಯುವ ನಾಯಕಿರಲ್ಲಿ ಸುಮನ್ ರಂಗನಾಥ್ ಕೂಡ ಒಬ್ಬರು… ಸ್ಯಾಂಡಲ್ ವುಡ್ ನಲ್ಲಿ ಮದುವೆಯ ಸಂಭ್ರಮ ಜೋರಾಗಿಯೇ ಇದೆ..ಇದೀಗ ಬಹುಭಾಷಾ ನಟಿ, ಸ್ಯಾಂಡಲ್ವುಡ್ನ ಗ್ಲಾಮರ್ ಗೊಂಬೆ ಸುಮನ್ ರಂಗನಾಥ್ ಬ್ಯಾಚುಲರ್ ಲೈಫ್ ಗೆ ಗುಡ್ ಬಾಯ್ ಹೇಳಿದ್ದಾರೆ... ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಜನ್ ಅನ್ನೋ ಬೆಂಗಳೂರು ಮೂಲದ ಉದ್ಯಮಿ ಜೊತೆ ಸಿಂಪಲ್ ಆಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ.
ಆರು ತಿಂಗಳ ಹಿಂದೆ ಪರಿಚಯವಾಗಿದ್ದ ಸಜನ್ ಹಾಗೂ ಸುಮನ್ ಬೆಸ್ಟ್ ಫ್ರೆಂಡ್ಸ್ ಆಗಿದ್ದರು... ನಂತರ ಈ ಜೋಡಿ ಪರಸ್ಪರ ಪ್ರೀತಿ ಮಾಡುತ್ತಿದ್ದರು.. ಇದೀಗ ಸುಮನ್ ರಂಗನಾಥ್, ಸಜನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದಹಾಗೇ ಸುಮನ್ ರಂಗನಾಥ್ ಕನ್ನಡ, ತಮಿಳು, ತೆಲುಗು, ಬೆಂಗಾಳಿ, ಬೋಜ್ಪುರಿ ಭಾಷೆ ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಯುವ ನಟಿಯರನ್ನು ನಾಚಿಸುವಂತೆ ಇರುವ ಈ ನಟಿ ಈಗಲೂ ಪಡ್ಡೆ ಹುಡುಗರ ನಿದ್ದೆ ಕದಿಯುವಂತೆ ಇದ್ದಾರೆ.. ಇದೀಗ ಬ್ಯಾಚುಲರ್ ಲೈಫ್ ಗೆ ಗುಡ್ ಬಾಯ್ ಹೇಳಿದ್ದಾರೆ.
Comments