‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದ ಈ ವಾರದ ಗೆಸ್ಟ್ ಇವರೇ ನೋಡಿ..!!

ಕಿರುತೆರೆಯ ಜನಪ್ರಿಯ ಷೋಗಳಲ್ಲಿ ವೀಕೆಂಡ್ ವಿಥ್ ರಮೇಶ್ ಸಾಕಷ್ಟು ಹೆಸರನ್ನು ಮಾಡಿದೆ… ತನ್ನದೇ ಆದ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದೆ.. ಈಗಾಗಲೇ ಮೂರು ಸೀಜನ್ ಗಳನ್ನು ಮುಗಿಸಿದೆ.. ಇದೀಗ ನಾಲ್ಕನೇ ಸೀಜನ್ ನಡೆಯುತ್ತದೆ.. ಆದರೆ ಅಭಿಮಾನಿಗಳು ನಾಲ್ಕನೇ ಸೀಜನ್ ಅನ್ನು ಹೊಗಳಿದ್ದಕ್ಕಿಂತ ತೆಗಳಿದ್ದೆ ಜಾಸ್ತಿಯಾಗಿತು..ಮೊದಲ ಸಂಚಿಕೆಯಲ್ಲಿ ಡಾ.ವೀರೇಂದ್ರ ಹೆಗ್ಗಡೆಯವರು ಬಂದಿದ್ದು ಬಿಟ್ಟರೆ ಬೇರೆಲ್ಲಾ ಎಪಿಸೋಡ್ ಗಳ ಬಗ್ಗೆ ನೆಗೆಟಿವ್ ಕಮೆಂಟ್ ಗಳೇ ಬಂದವು..ಆದರೆ ಕಳೆದ ವಾರದ ಎಪಿಸೋಡ್ ಬಗ್ಗೆ ಮೆಚ್ಚುಗೆಯ ಸುರಿಮಳೆಯೇ ಸುರಿವು.. ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿಯವರ ಬದುಕಿನ ಜೀವನ ಅನಾವರಣಗೊಂಡಿತ್ತು.
ಈ ಬಾರಿ ವೀಕೆಂಡ್ ವಿತ್ ರಮೇಶ್ ಷೋ ಗೆ ಮಂಡ್ಯದ ನೂತನ ಸಂಸದೆ ,ನಟಿ ಸುಮಲತಾ ಅಂಬರೀಶ್ ಬರಲಿದ್ದಾರೆ. ಮಂಡ್ಯ ಲೋಕ ಸಭಾ ಯುದ್ದದಲ್ಲಿ ಗೆಲುವಿನ ನಗೆ ಬೀರಿರುವ ಸುಮಲತಾ ಹಲವು ಚಲನಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಹೆಸರು ಮಾಡಿದ್ದವರು. ಕನ್ನಡ ಮಾತ್ರವಲ್ಲದೆ ಮಲೆಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡಿರುವ ಸುಮಲತಾ ಜೀವನದ ಅನಾವರಣವನ್ನು ಈ ವಾರ ನೋಡಬಹುದು .ಅಂಬರೀಶ್, ವಿಷ್ಣುವರ್ಧನ್, ಶಂಕರ್ ನಾಗ್, ಚಿರಂಜೀವಿ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆಗೆ ಸುಮಲತಾ ಅಭಿನಯಿಸಿದ್ದು ವಾಹಿನಿ ಸುಮಲತಾ ಎಪಿಸೋಡ್ ಮಾಹಿತಿ ನೀಡಿದೆ. ಶನಿವಾರದ ಎಫಿಸೋಡ್ ನಲ್ಲಿ ಸುಮಲತಾ ಕಾಣಿಸಿಕೊಳ್ಳಲಿದ್ದು, ಇನ್ನೊಂದು ಎಪಿಸೋಡ್ ನಲ್ಲಿ ನಿರ್ದೇಶಕ ನಾಗಾಭರಣ ಅವರ ಜೀವನದ ಕಥೆ ಅನಾವರಣಗೊಳ್ಳಲಿದೆ.
Comments