ರಾಕಿಂಗ್ ಸ್ಟಾರ್ ನ್ಯೂ ಲುಕ್ ಗೆ ಫಿದಾ ಆದ್ರು ಅಭಿಮಾನಿಗಳು..!!
ಕೆಜಿಎಫ್ ಸಿನಿಮಾ ಬಂದ ಮೇಲೆ ಸ್ಯಾಂಡಲ್ ವುಡ್ ಲೆವೆಲ್ ಹಾಲಿವುಡ್ ರೇಂಜ್ ಗೆ ಬದಲಾಯ್ತು… ಯಶ್ ಅಭಿನಯಿಸಿದ ಕೆಜಿಎಫ್ ಸಿನಿಮಾ ಸಖತ್ ಕ್ರೇಜ್ ಕ್ರಿಯೇಟ್ ಮಾಡಿತ್ತು.. ಯಶ್ ಹೇರ್ ಸ್ಟೈಲ್, ಬಿಯಾರ್ಡ್ ಅಂತೂ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದಂತೂ ಸುಳ್ಳಲ್ಲ.. ಅವರನ್ನೆ ಫಾಲೋ ಮಾಡಿದ ಅಭಿಮಾನಿಗಳು ಸಾಕಷ್ಟು ಜನ ಇದ್ದಾರೆ.. ಇದೀಗ ರಾಕಿಂಗ್ ಸ್ಟಾರ್ ಯಶ್ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಪ್ರಕಟಿಸಿದ ಫೋಟೋ ಒಂದು ಇದೀಗ ಸಖತ್ ವೈರಲ್ ಆಗಿದೆ. ಅಭಿಮಾನಿಗಳು ಯಶ್ ಖಡಕ್ ಲುಕ್ ಗೆ ಫಿದಾ ಆಗಿದ್ದಾರೆ.
ಯಶ್ ಬಿಯಾರ್ಡೋ ಹೇರ್ ಆಯಿಲ್ ಕಂಪನಿಯ ರಾಯಭಾರಿಯಾಗಿರುವ ಸುದ್ದಿ ಎಲ್ಲರಿಗೂ ಕೂಡ ತಿಳಿದೆ ಇದೆ… ಇದೀಗ ಆ ಸಂಸ್ಥೆಯ ಜಾಹೀರಾತಿಗೆ ಯಶ್ ನೀಡಿರುವ ಪೋಸ್ ಒಂದನ್ನು ಅವರು ರಿವೀಲ್ ಮಾಡಿದ್ದಾರೆ... ಖಡಕ್ ಲುಕ್ ನಲ್ಲಿ ಕೂತಿರುವ ಯಶ್ ಸ್ಟೈಲ್ ನೋಡಿ ಅಭಿಮಾನಿಗಳು ಏನು ಲುಕ್ ಗುರೂ...? ಸಿಂಹದ ಥರಾ ಕಾಣಿಸ್ತಿದ್ದೀರಾ. ಪಕ್ಕಾ ರಾಕಿ ಬಾಯ್ ಎಂದು ಹಾಡಿ ಹೊಗಳಿದ್ದಾರೆ. ರಾಕಿಬಾಯ್ ತನ್ನದೆ ಆದ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ… ಯಶೋ ಮಾರ್ಗದ ಮೂಲಕ ಸಾಕಷ್ಟು ಹಳ್ಳಿಗಳಿಗೆ ನೆರವು ನೀಡುತ್ತಿದ್ದಾರೆ.. ಈ ವಿಷಯಕ್ಕಾಗಿಯೇ ಯಶ್ ಅಭಿಮಾನಿಗಳಿಗೆ ತುಂಬಾ ಹತ್ತಿರವಾಗೋದು ಹಾಗೂ ಇಷ್ಟವಾಗುವುದು…
Comments