ಕಿಚ್ಚ-ದಚ್ಚುವಿನ ರೇಸ್ ನಲ್ಲಿ ಗೆಲ್ಲುವವರ್ಯಾರು..!! ನೆನ್ನೆ ಪೈಲ್ವಾನ್..!! ಇಂದು ರಾಬರ್ಟ್..!!!
ಸ್ಯಾಂಡಲ್ ವುಡ್ ಕಿಚ್ಚನಿಗೆ ಮತ್ತು ದಚ್ಚುನಿಗೆ ಅಭಿಮಾನಿ ಬಳಗ ಹೆಚ್ಚಾಗಿಯೇ ಇದೆ… ಇಬ್ಬರ ಅಭಿಮಾನಿಗಳು ಕೂಡ ಅವರ ಸಿನಿಮಾಗಾಗಿ ಕಾಯುತ್ತಿರುತ್ತಾರೆ.. ನೆನ್ನೆ ಅಷ್ಟೆ ಕಿಚ್ಚ ಅಭಿನಯದ ಪೈಲ್ವಾನ್ ಸಿನಿಮಾದ ಸ್ಪೆಷಲ್ ಪೋಸ್ಟರ್ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಿಜಯ್ ಸೇತುಪತಿ ತಮಿಳು, ಚಿರಂಜೀವಿ ತೆಲುಗು ಪೋಸ್ಟರ್, ಸುನೀಲ್ ಶೆಟ್ಟಿ ಹಿಂದಿ, ಮೋಹನ್ ಲಾಲ್ ಮಲಯಾಳಂ, ಪೋಸ್ಟರ್ ಶೇರ್ ಮಾಡಿದ್ರೆ ಸುದೀಪ್ ಕನ್ನಡ ಪೋಸ್ಟರ್ ಅನಾವರಣಗೊಳಿಸಿದ್ದಾರೆ. ಇದೀಗ ಐದು ಭಾಷೆಯ ಪೋಸ್ಟರ್ಸ್ ಬಿಡುಗಡೆಯಾಗಿದೆ..
ಅದೇ ರೀತಿ ಇಂದು ದರ್ಶನ್ ಅಭಿಮಾನಿಗಳಿಗೆ ಸಂಜೆಯ ವೇಳೆಗೆ ಗುಡ್ ನ್ಯೂಸ್ ಸಿಗಲಿದೆ. ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಸ್ಪೆಷಲ್ ಪೋಸ್ಟರ್ ಬಿಡುಗಡೆಯಾಗುತ್ತಿದೆ. ಇಬ್ಬರ ನಡುವಿನ ರೇಸ್ ನಲ್ಲಿ ಗೆಲ್ಲುವವರು ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. . ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಪೈಲ್ವಾನ್ ಪೋಸ್ಟರ್ ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಇಂದು ಸಂಜೆ ದರ್ಶನ್ ಟ್ವಿಟರ್ ಖಾತೆಯಲ್ಲಿ ರಾಬರ್ಟ್ ಪೋಸ್ಟರ್ ಬಿಡುಗಡೆಯಾಗಲಿದೆ. ರಾಬರ್ಟ್ ಸಿನಿಮಾದ ಪೋಸ್ಟರ್ ಗೆ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
Comments