ಕೊನೆಗೂ ಬಂದ ಪೈಲ್ವಾನ್ ..!! ಹೇಗಿದೆ ಪೋಸ್ಟರ್ ಗೊತ್ತಾ..?
ಸ್ಯಾಂಡಲ್’ವುಡ್ ನ ಬಹುಬೇಡಿಕೆಯ ಸಿನಿಮಾಗಳಲ್ಲಿ ಪೈಲ್ವಾನ್ ಸಿನಿಮಾ ಕೂಡ.. ಕಿಚ್ಚನ ಅಭಿಮಾನಿಗಳಂತೂ ಪೈಲ್ವಾನ್ ನನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ… ಇದೀಗ ಕಿಚ್ಚನ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ.. ಕಿಚ್ಚನ ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾಯ್ತಿದ್ದ ಪೈಲ್ವಾನ್ ಬಾಕ್ಸಿಂಗ್ ಪೋಸ್ಟರ್ ಬಿಡುಗಡೆ ಆಗಿದೆ. ಆವೇಶದಿಂದ ಪೈಲ್ವಾನ್ ಎದುರಾಳಿಗೆ ಪಂಚ್ ಕೊಟ್ಟಂತಿರೋ ಪೋಸ್ಟರ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ.
ವಿಜಯ್ ಸೇತುಪತಿ ತಮಿಳು, ಚಿರಂಜೀವಿ ತೆಲುಗು ಪೋಸ್ಟರ್, ಸುನೀಲ್ ಶೆಟ್ಟಿ ಹಿಂದಿ, ಮೋಹನ್ ಲಾಲ್ ಮಲಯಾಳಂ, ಪೋಸ್ಟರ್ ಶೇರ್ ಮಾಡಿದ್ರೆ ಸುದೀಪ್ ಕನ್ನಡ ಪೋಸ್ಟರ್ ಅನಾವರಣಗೊಳಿಸಿದ್ದಾರೆ. ಕೆಜಿಎಫ್ ಮಾದರಿಯಲ್ಲಿ ಪೈಲ್ವಾನ್ ಪ್ಯಾನ್ ಇಂಡಿಯಾ ಸಿನಿಮಾ ಆಗಿ ರಿಲೀಸ್ ಆಗ್ತಿದ್ದು, ಐದು ಭಾಷೆಯ ಪೋಸ್ಟರ್ಸ್ ಬಿಡುಗಡೆಯಾಗಿದೆ.. ಹೆಬ್ಬುಲಿ ಖ್ಯಾತಿಯ ಕೃಷ್ಣ ಪೈಲ್ವಾನ್ ಚಿತ್ರವನ್ನ ನಿರ್ಮಿಸಿ ನಿರ್ದೇಶನದ ಮಾಡಿದ್ದಾರೆ. ಹಾಲಿವುಡ್ ತಂತ್ರಜ್ಞರು ಪೈಲ್ವಾನ್ ಕಿಚ್ಚನಿಗೆ ಮತ್ತಷ್ಟು ಬಲ ತುಂಬಿದ್ದಾರೆ. ಆಕಾಂಕ್ಷಾ ಸಿಂಗ್ ಚಿತ್ರದಲ್ಲಿ ಕಿಚ್ಚನ ಜೊತೆ ಸ್ಕ್ರಿನ್ ಷೇರ್ ಮಾಡಿದ್ದಾರೆ. ವರಲಕ್ಷ್ಮಿ ಹಬ್ಬಕ್ಕೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
Comments