‘ಮಿನ್ಕಣಜ’ ಎಂಬ ವಿಭಿನ್ನ ಸಿನಿಮಾ..!! ಟೀಸರ್ ಹೇಗಿದೆ ಗೊತ್ತಾ..?
ಇತ್ತಿಚಿಗೆ ವಿಭಿನ್ನ ಕಥಾ ಹಂದರವನ್ನು ಇಟ್ಟುಕೊಂಡು ಸಾಕಷ್ಡು ಸಿನಿಮಾಗಳು ತೆರೆ ಮೇಲೆ ಬರುತ್ತಿವೆ.. ಅದೇ ಸಾಲಿಗೆ ಇದೀಗ ಮತ್ತೊಂದು ಸಿನಿಮಾ ಸೇರ್ಪಡೆಯಾಗುತ್ತಿದೆ.. ಅದೇ ಕಿರು ಮಿನ್ಕಣಜ… ಹೆಸರೇ ಒಂದು ರೀತಿ ವಿಭಿನ್ನವಾಗಿದೆ,.., ಇನ್ನೂ ಸಿನಿಮಾ ಯಾವ ರೀತಿಯಾಗಿ ಸಿನಿಮಾ ವಿಭಿನ್ನವಾಗಿರುತ್ತದೆಯೋ ಗೊತ್ತಿಲ್ಲ….ಸದ್ಯ ಟೀಸರ್ ಅಷ್ಟೆ ಬಿಡುಗಡೆ ಮಾಡಿದೆ ಚಿತ್ರತಂಡ. ಟೀಸರ್ ಸಾಕಷ್ಟು ಕಮಾಲ್ ಮಾಡಿರುವ ಚಿತ್ರತಂಡ ಮುಂಬರುವ ದಿನಗಳಲ್ಲಿ ಯಶಸ್ಸನ್ನು ಕಾಣುವುದರಲ್ಲಿ ಡೌಟೆ ಇಲ್ಲ…
ಎಸ್.. ಕಿರು ಮಿನ್ಕಣಜ ಸಿನಿಮಾ ಗೆ ಎಂ .ಮಂಜು ಆ್ಯಕ್ಷಟ್ ಕಟ್ ಹೇಳಲಿದ್ದು, ಜನಾರ್ಧನ್.ಆರ್ ಬಂಡವಾಳವನ್ನು ಹೂಡುತ್ತಿದ್ದಾರೆ.. ಸುರೇಶ್ ಬಾಬು ಅವರ ಕ್ಯಾಮರೆ ಕೈ ಚಳಕ ಈ ಚಿತ್ರಕ್ಕಿದೆ. ಬಹುತೇಕ ನಟನೆಯಲ್ಲಿ ನೈಪುಣ್ಯತೆಯನ್ನು ಹೊಂದಿರುವ ಕಲಾವಿದರನ್ನೆ ಆಯ್ಕೆ ಮಾಡಿಕೊಂಡಿದೆ ಚಿತ್ರತಂಡ.. ಗಂಧರ್ವ ಹಾಗೂ ದೃವರಾಜ್ ವಿ.ಎಫ್ ಅವರ ಸಂಗೀತ ನಿರ್ದೇಶನವಿದೆ. ಗೋಪಾಲ್ ಮಹಾರಾಜ್ ಅವರ ಸಾಹಿತ್ಯವಿದೆ. ಚುಟು ಚುಟು ಖ್ಯಾತಿಯ ಭೂಷಣ್ ಮತ್ತು ಮಂಜು ಅವರ ನೃತ್ಯ ಸಂಯೋಜನೆ ಇದೆ. ವಿಜಯ್ ಪ್ರಕಾಶ್, ಅನುರಾಧ ಭಟ್, ವ್ಯಾಸರಾಜ್, ಸಂತೋಷ್ ವೆಂಕಿ ಈ ಸಿನಿಮಾದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಅರ್ಜುನ್, ರವಿಚಂದ್ರ, ವರ್ಷಿಕಾ, ಶ್ರೀಧರ್, ಶ್ರುತಿ ನಾಯಕ್ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಸದ್ಯ ಟೀಸರ್ ನಲ್ಲಿ ಹೆಚ್ಚು ಕ್ಯೂರಾಸಿಟಿಯನ್ನು ಕ್ರಿಯೆಟ್ ಮಾಡಿರುವ ಸಿನಿಮಾ ತೆರೆ ಮೇಲೆ ಯಾವ ರೀತಿ ಕಮಾಲ್ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Comments