ಮುಂಗಾರು ಮಳೆ ಹುಡುಗ ಇದೀಗ ಚೌಕಿದಾರ್..!!

ಚೌಕಿದಾರ್ ಎಂದರೆ ನಮಗೆ ಫಟ್ ಅಂತಾ ನೆನಪಿಗೆ ಬರೋದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು.. ಹೌದು ಅವರನ್ನುಚೌಕಿದಾರ್ ಅಂತಾನೇ ಕರೆಯುತ್ತಾರೆ.. ಈ ಪದದಿಂದ ಸಾಕಷ್ಟು ಜನರು ಪ್ರಚೋದಿತರಾಗಿದ್ದಾರೆ. ಸಾಮಾಝಿಕ ಜಾಲತಾಣಗಳಲ್ಲಿ ಈ ಪದ ಒಂದು ರೀತಿಯ ಟ್ರೆಂಡ್ ಕ್ರಿಯೆಟ್ ಮಾಡಿ ಬಿಟ್ಟಿದೆ.. ಬಹಳಷ್ಟು ಜನ ತಮ್ಮ ತಮ್ಮ ಹೆಸರಿನ ಜೊತೆ ಚೌಕಿದಾರ್ ಎನ್ನುವ ಪದವನ್ನು ಸೇರಿಸಿಕೊಂಡಿದ್ದಾರೆ.
ಇದೀಗ ಚೌಕಿದಾರ್ ಎಂಬ ಹೆಸರಿನಲ್ಲಿ ಸಿನಿಮಾವೊಂದು ತೆರೆ ಮೇಲೆ ಬರುತ್ತಿದೆ. ಕನ್ನಡ ಚಿತ್ರರಂಗದ ಫಿಲಂ ಚೇಂಬರ್ ನಿಂದ ಅನುಮತಿ ಪಡೆದುಕೊಂಡು ರಥಾವರ ಸಿನಿಮಾ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಅವರು ಹೊಸದಾಗಿ ನಿರ್ದೇಶನ ಮಾಡುತ್ತಿರುವ ಚೌಕಿದಾರ್ ಎಂಬ ಚಿತ್ರದಲ್ಲಿ ಗಣೇಶ್ ರವರು ನಟಿಸುವುದು ಇದೀಗ ಕನ್ಫರ್ಮ್ ಆಗಿದೆ. ವಿಭಿನ್ನವಾಗಿ ಹೊಸ ಹೊಸ ಪ್ರಯೋಗಗಳಿಗೆ ಮುಂದಾಗಿರುವ ಗೋಲ್ಡನ್ ಸ್ಟಾರ್ ಗಣೇಶ್ ರವರು ಈ ಸಿನಿಮಾದಲ್ಲಿ 55 ವರ್ಷದ ವ್ಯಕ್ತಿಯ ಪಾತ್ರದಲ್ಲಿ ನಟನೆ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಈ ವಿಷಯ ಕೇಳುತ್ತಿದ್ದಂತೆ ಗಾಂಧಿನಗರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ರಾಜಕೀಯಕ್ಕೆ ಸಂಬಂಧಪಟ್ಟ ಸಿನಿಮಾ ಮಾಡುತ್ತಿರಬಹುದು ಎಂಬ ಮಾಹಿತಿ ಹರಿದಾಡುತ್ತಿದೆ. ಮುಂಗಾರು ಮಳೆ ಖ್ಯಾತಿಯ ಗೋಲ್ಡನ್ ಸ್ಟಾರ್ ಗಣೇಶ್ ರವರು ಚೌಕಿದಾರ್ ಆಗಿ ಗಾಂಧಿನಗರದಲ್ಲಿ ಹವಾ ಕ್ರಿಯೆಟ್ ಮಾಡಲು ಸಿದ್ದವಾಗುತ್ತಿದ್ದಾರೆ.. ಚೌಕಿದಾರ್ ಆಗಿ ಗಣೇಶ್ ತೆರೆ ಮೇಲೆ ಯಾವ ರೀತಿ ಮಿಂಚಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
Comments