ಸಿನಿಮಾ ಶೂಟಿಂಗ್ ವೇಳೆ ಇಬ್ಬರ ದುರ್ಮರಣ..!! ಪ್ರಕರಣಕ್ಕೆ ಸಿಕ್ತು ಟ್ವಿಸ್ಟ್..!!!

ಸಿನಿಮಾ ಚಿತ್ರಿಕರಣದ ಸಮಯದಲ್ಲಿ ಸಾಕಷ್ಟು ಅವಘಡಗಳು ಸಂಭವಿಸುತ್ತಿರುತ್ತವೆ.. ಅದೇ ರೀತಿ ಕೆಲ ತಿಂಗಳುಗಳ ಹಿಂದೆ ನಟ ಚಿರಂಜೀವಿ ಸರ್ಜಾ ಅಭಿನಯದ `ರಣಂ’ ಚಿತ್ರದ ಶೂಟಿಂಗ್ ವೇಳೆ ಸಿಲಿಂಡರ್ ಸ್ಪೋಟಗೊಂಡು ಇಬ್ಬರು ಸಾವನ್ನಪ್ಪಿದ್ದರು.. ಇದೀಗ ಇಬ್ಬರು ದುರ್ಮರಣಕ್ಕೀಡಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕಾನ್ಸ್ಟೇಬಲ್ ನ ಹಣದ ದಾಹಕ್ಕೆ ಇಬ್ಬರು ಅಮಾಯಕರು ಬಲಿಯಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ.
ಚಿತ್ರಿಕರಣ ಮಾಡಲು ಅನುಮತಿ ಇಲ್ಲದೇ ಹೋದರೂ ಕೂಡ 5 ಸಾವಿರ ಹಣ ಪಡೆದು ಆ ಪೇದೆ ಚಿತ್ರಿಕರಣ ಮಾಡಿಸಿದ್ದನು. ತನಿಖಾ ವರದಿ ಕೈ ಸೇರುತ್ತಿದ್ದಂತೆಯೇ ಪೊಲೀಸ್ ಪೇದೆಯನ್ನು ಅಮಾನತು ಮಾಡುವಂತೆ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ಆದೇಶ ಹೊರಡಿಸಿದ್ದಾರೆ. ಬಾಗಲೂರು ಠಾಣೆಯ ಪೇದೆಯಾಗಿದ್ದ ಭೀಮಾ ಶಂಕರ್ ಕೇವಲ 5,000 ರೂ. ಲಂಚ ಪಡೆದ ಕಾರಣ ಇಬ್ಬರ ಸಾವಿಗೆ ಕಾರಣವಾಗಿದ್ದಾನೆ. ಮಾರ್ಚ್ ತಿಂಗಳ 29ರಂದು ಬಾಗಲೂರಿನ ಶೆಲ್ ಕಂಪನಿ ಬಳಿ ‘ರಣಂ’ ಸಿನಿಮಾ ಚಿತ್ರಿಕರಣ ನಡೆಯುತ್ತಿತ್ತು.. ಆಗ ಸಿಲಿಂಡರ್ ಬ್ಲಾಸ್ಟ್ ಆಗಿ ಸಮೀರಾ ಬಾನು (28) ಹಾಗೂ ಆಕೆಯ ಮಗಳು ಆಯೇಶಾ ಮೃತಪಟ್ಟಿದ್ದರು. ಪ್ರಕರಣದ ತನಿಖೆ ವೇಳೆ ಪೊಲೀಸರಲ್ಲೇ ಆಂತರಿಕ ವೈಫಲ್ಯದ ಅನುಮಾನ ಮೂಡಿತ್ತು. ಈ ಹಿನ್ನೆಲೆಯಲ್ಲಿ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಆಂತರಿಕ ತನಿಖೆ ನಡೆಸುವಂತೆ ಸೂಚಿಸಿದ್ದರು.ಇದೀಗ ವಿಷಯ ತಿಳಿದು ಬಂದಿದೆ.. ಆ ಪೇದೆಯನ್ನು ವಜಾಗೊಳಿಸಲಾಗಿದೆ
Comments