ನಗ್ನ ಚಿತ್ರ ಹಾಕಿದ ಮಾಜಿ ಬಿಗ್ ಬಾಸ್ ಸ್ಪರ್ಧಿ..!!

ಇತ್ತಿಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ನಟಿಮಣಿಯರ ಹಾಟ್ ಪೋಟೋಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಸುದ್ದಿ ಮಾಡುತ್ತಿವೆ.. ಹಾಟ್ ಪೋಟೋಗಳನ್ನು ನೋಡಿದ ಪಡ್ಡೆ ಹುಡುಗರ ನಿದ್ದೆ ಕೆಲವೊಮ್ಮೆ ಮಿಸ್ ಆಗಿರೋದು ಕೂಡ ಉಂಟು.. ಆಗಿಂದಾಗೆ ತಮ್ಮ ಫೋಟೋಗಳಿಂದಾಗಿ ಪದೇ ಪದೇ ವಿವಾದಕ್ಕೊಳಗಾಗುತ್ತಿರುವ ಸೋಫಿಯಾ ಹಯಾತ್ ಇದೀಗ ಮತ್ತಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣಗಲ್ಲಿ ಹರಿ ಬಿಟ್ಟಿದ್ದಾರೆ. ಮಾಜಿ ಬಿಗ್ ಬಾಸ್ ಸ್ಪರ್ಧಿ ಸೋಫಿಯಾ ಹಯಾತ್ ತಮ್ಮ ಫೋಟೋಗಳಿಗೆ ಮತ್ತಷ್ಟು ವಕಾಲತ್ತು ವಹಿಸಿಕೊಂಡು ಮಾತನಾಡಿದ್ದಾರೆ.
ಕಾಳಿಯನ್ನು ನಗ್ನವಾಗಿ ಚಿತ್ರಿಸಲಾಗುತ್ತಿದೆ ಎಂದು ಕೆಲವರು ಆರೋಪಿಸುತ್ತಾರೆ. ಆದರೆ ಅದು ನಗ್ನವಲ್ಲ. ತಾಯಿಯನ್ನು ನಗ್ನವಾಗಿ ನೋಡಲು ಸಾಧ್ಯವಿಲ್ಲ. ಇದು ಭಾರತಕ್ಕೆ ಪಾಶ್ಚಾತ್ಯ ಸಂಸ್ಕೃತಿಯಿಂದ ಬಂದ ಬಳುವಳಿ ಎಂದು ಮಾಜಿ ಬಿಗ್ ಬಾಸ್ ಸ್ಪರ್ಧಿ ಸೋಫಿಯಾ ಹಯಾತ್ ತಿಳಿಸಿದ್ದಾರೆ. ಭಾರತದಲ್ಲಿ ಬ್ರಿಟಿಷರ ಆಗಮನಕ್ಕೂ ಮೊದಲು ಮಹಿಳೆಯರು ಮೇಲ್ವಸ್ತ್ರವನ್ನು ಧರಿಸುತ್ತಿರಲಿಲ್ಲ. ಆದರೆ ಭಾರತಕ್ಕೆ ಆಗಮಿಸಿದ ಬ್ರಿಟಿಷರು, ಮೇಲ್ವಸ್ತ್ರ ಧರಿಸದೇ ಇರುವುದು ಅನಾಗರಿಕತೆ ಎಂದು ಬಿಂಬಿಸಿದರು…. ಇದರ ಪ್ರಭಾವಕ್ಕೆ ಒಳಗಾದ ನಾವು ಇಂದಿಗೂ ಅದನ್ನೇ ಅನುಸರಿಸುತ್ತಿದ್ದೇವೆ. ಬೇಕಿದ್ದರೆ ಭಾರತದ ಯಾವುದೇ ದೇವಸ್ಥಾನಗಳಿಗೆ ಹೋಗಿ ನೋಡಿ, ಅಲ್ಲಿ ಯಾವುದೇ ದೇವತೆಗಳ ಮೇಲ್ಭಾಗ ಮುಚ್ಚಲ್ಪಟ್ಟಿರುವುದಿಲ್ಲ ಎಂದಿದ್ದಾರೆ.. ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ಹಾಕಿ ಕಮೆಂಟ್ ಮಾಡಿದವರಿಗೆ ಸರಿಯಾದ ರೀತಿಯಲ್ಲಿಯೇ ಸಮರ್ಥನೆ ಕೊಟ್ಟಿದ್ದಾರೆ. ಹೆಣ್ಣು ಮಕ್ಕಳನ್ನು ಯಾರು ಕೂಡ ಕೆಟ್ಟದಾಗಿ ಬಿಂಬಿಸಬಾರದು ಎಂದಿದ್ದಾರೆ.
Comments