ವಯಸ್ಸು ಇನ್ನೂ 20 ದಾಟಿಲ್ಲ.. ಇವರ ಸಂಭಾವನೆ ಕೇಳುದ್ರೆ ಶಾಕ್ ಆಗ್ತೀರಾ..!!

ಇತ್ತಿಚಿನ ಕಾಲದಲ್ಲಿ ದುಡಿಮೆ ಅನ್ನೋದು ತುಂಬಾನೇ ಮುಖ್ಯ…ವಯಸ್ಸು ಇದ್ದಾಗಲೇ ದುಡಿದು ಒಂದಿಷ್ಟು ಹಣವನ್ನು ಸಂಪಾದನೆ ಮಾಡಿಕೊಳ್ಳಬೇಕು ಎನ್ನುವುದು ಹಿರಿಯರ ಮಾತು…ಇನ್ನೂ ಕೆಲವರು ಸಾಯುವವರೆಗೂ ಕೂಡ ದುಡಿತಾನೇ ಇರುತ್ತಾರೆ…ಇನ್ನೂ ಕೆಲವರು ವಯಸ್ಸಿಗಿಂತ ಹೆಚ್ಚಾಗಿಯೇ ಹಣ ಸಂಪಾದಿಸುತ್ತಾರೆ.. ಅದೇ ಸಾಲಿಗೆ ಒಂದಿಷ್ಟು ನಟಿಯರು ಕೂಡ ಸೇರಿಕೊಳ್ಳುತ್ತಾರೆ.. ಇವರ ವಯಸ್ಸು ಇನ್ನು 20 ವರ್ಷ ದಾಟಿಲ್ಲ ಆದರೆ ಇವರ ನಿತ್ಯದ ಸಂಬಳ ಕೇಳುದ್ರೆ ಶಾಕ್ ಆಗ್ತೀರಾ..
ಕಿರುತೆರೆಯ ಧಾರವಾಹಿ ನಟಿಯರು, ಅವರ ಉದ್ಯೋಗ ಬಹಳ ಕಷ್ಟ, ರಜೆ ಇರುವುದಿಲ್ಲ, ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯೋದು ಕೂಡ ತುಂಬಾ ಕಷ್ಟವಾಗುತ್ತದೆ.. ಬಣ್ಣದ ಜಗತ್ತಿನ ಜನರು, ಸಾಮಾನ್ಯ ಜನರ ಲೈಫ್’ಗಿಂತ ವಿಭಿನ್ನವಾಗಿರುತ್ತದೆ..ಬಹುತೇಕ ಸೆಲೆಬ್ರಿಟಿಗಳು ವಯಸ್ಸು ಇನ್ನು 20 ದಾಟಿಲ್ಲ. ಅವರು ನಿತ್ಯದ ಸಂಬಳ ಕೇಳಿದ್ರೆ ಬೆರಗಾಗುತ್ತೆ. ಅಶ್ನೂರ್ ಕೌರ್ ಮೊನ್ನೆ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇಕಡ 93 ರಷ್ಟು ಅಂಕಗಳಿಸಿ ಹೆಡ್ ಲೈನ್ ಸುದ್ದಿಯಾಗಿದ್ದಳು. ಈ ಪೋರಿ ಚಿಕ್ಕ ಮಗುವಾಗಿದ್ದಾಗಿನಿಂದ ಧಾರವಾಹಿಗಳಲ್ಲಿ ನಟಿಸುತ್ತಿದ್ದಾಳೆ. ಈಕೆ ಒಂದು ಎಪಿಸೋಡ್ ಗೆ 40ರಿಂದ 45 ಸಾವಿರ ಸಂಭಾವನೆ ಪಡೆಯುತ್ತಾಳೆ. ಅವನೀತ್ ಕೌರ್ 30 ಸಾವಿರ, ಝಾನ್ಸಿ ಕೀ ರಾಣಿ ಧಾರವಾಹಿ ಖ್ಯಾತಿಯ ಅನುಷ್ಕಾ ಸೇನ್ ಪ್ರತಿ ಎಪಿಸೋಡ್ ಗೆ ಹೆಚ್ಚು ಕಡಿಮೆ 48 ಸಾವಿರ ಪಡೆಯುತ್ತಾಳೆ.
Comments