26 ಅಡಿಯಿಂದ ಜಿಗಿದ ನವರಸ ನಾಯಕ ಜಗ್ಗೇಶ್..!! ಕಾರಣ ಏನ್ ಗೊತ್ತಾ..?
ಸಿನಿಮಾ ಜಗತ್ತು ಅನ್ನೋದೇ ಹಾಗೆ ಕೆಲವೊಮ್ಮೆ ಕೈ ಹಿಡಿಯುತ್ತದೆ, ಮತ್ತೆ ಕೆಲವೊಮ್ಮೆ ಕೈ ಬಿಡುತ್ತದೆ.. ಬಣ್ಣದ ಜಗತ್ತಿಗೆ ಮೊದಲ ಹೆಜ್ಜೆ ಇಡುವಾಗ ಎಲ್ಲರಿಗೂ ಕೂಡ ಭಯ ಇದ್ದೆ ಇರುತ್ತದೆ. ಸಿನಿಮಾರಂಗದಲ್ಲಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ… ಆದರೆ ನಾಯಕ ಜಗ್ಗೇಶ್ ಗೆ ಎದುರಾಗಿದ್ದು ಕೂಡ ಇದೇ ಸಮಸ್ಯೆಯೇ,.. ಎಲ್ಲಾ ಕಲಾವಿದರೂ ಕೂಡ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸೇ ಇರುತ್ತಾರೆ.
ನವರಸನಾಯಕ ಜಗ್ಗೇಶ್ ತಮ್ಮ ಕಲಾ ಜೀವನ ಕಟ್ಟಿಕೊಳ್ಳಲು ಎಷ್ಟು ಕಷ್ಟಪಟ್ಟಿದ್ದರೆಂದು ಎಲ್ಲರಿಗೂ ಗೊತ್ತು. ಇದೀಗ ಹಳೆಯ ಘಟನೆಯೊಂದನ್ನು ಜಗ್ಗೇಶ್ ನೆನಪಿಸಿಕೊಂಡಿದ್ದಾರೆ. 1987 ರಲ್ಲಿ ಬಂದ ಸಂಗ್ರಾಮ ಚಿತ್ರದಲ್ಲಿ ಪಾತ್ರ ಮಾಡಿದ್ದ ಜಗ್ಗೇಶ್ ಆ ಸಿನಿಮಾದಲ್ಲಿ ಎತ್ತರದಿಂದ ಜಿಗಿಯುವ ದೃಶ್ಯವೊಂದರ ಹಿಂದಿನ ಕತೆಯನ್ನು ಹೇಳಿಕೊಂಡಿದ್ದಾರೆ. ಅಭಿಮಾನಿಯೊಬ್ಬರು ಈ ಬಗ್ಗೆ ನೆನಪಿಸಿದ್ದಕ್ಕೆ ಜಗ್ಗೇಶ್ ಅಂದಿನ ತಮ್ಮ ಪರಿಸ್ಥಿತಿ ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ. ಹೇಳಿದ ಕೆಲಸ ಮಾಡದಿದ್ದರೆ ಅನ್ನ ಸಿಗುತ್ತಿರಲಿಲ್ಲ. 26 ಅಡಿ ಮಹಡಿಯಿಂದ ಕೆಳಗೆ ಎಸೆದರು. ಅಡಿಯಲ್ಲಿ ಮೂವರು ಗೋಣಿ ಚೀಲ ಹಿಡಿದು ನಿಂತಿದ್ದರು. ಪರಿಮಳ, 6 ತಿಂಗಳ ಮಗು ಗುರುರಾಜ್ ಮತ್ತು ನನ್ನ ಕಲಾಬದುಕಿಗಾಗಿ ಮಾಡಿದ ಸಾಹಸ ಅದಾಗಿತ್ತು. ಅದು ನಾನು ನಡೆದು ಬಂದ ಮುಳ್ಳಿನ ಹಾಸಿಗೆಯಾಗಿತ್ತು. ಇಂದು ಆ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ ಎಂದು ಜಗ್ಗೇಶ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.. ಕಲಾ ಬದುಕು ಎನ್ನುವುದು ಅಷ್ಟು ಸುಲಭದ ಕೆಲಸವಲ್ಲ… ಅದರಲ್ಲಿ ಕಷ್ಟ ಪಟ್ಟರೆ ಮುಂದಿನ ದಿನಗಳು ಚೆನ್ನಾಗಿ ಇರುತ್ತವೆ…
Comments