‘ಅಮರ್’ ಆದ ಅಭಿಗೆ ಕಿಚ್ಚ ಸುದೀಪ್ ಹೇಳಿದ್ದೇನು..?
ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾವಾದ ಅಮರ್ ಇಂದು ತೆರೆ ಕಂಡಿದೆ… ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಅಂಬರೀಶ್ ಮೊದಲ ಸಿನಿಮಾವಾದ 'ಅಮರ್' ಇಂದು ರಾಜ್ಯಾದ್ಯಂತ ತೆರೆ ಕಂಡ ಬೆನ್ನಲ್ಲೇ ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಗೆ ಚಿತ್ರರಂಗದ ಸ್ಟಾರ್ ನಟರು ಶುಭ ಹಾರೈಸುತ್ತಿದ್ದಾರೆ.
ಸೂಪರ್ ಸ್ಟಾರ್ ರಜನೀಕಾಂತ್ ಅವರು ವಿಡಿಯೋ ಸಂದೇಶ ಮೂಲಕ ಅಭಿಷೇಕ್ ಗೆ ಬೆಸ್ಟ್ ಆಫ್ ಲಕ್ ತಿಳಿಸಿದ್ದಾರೆ.. ಇದೀಗ ಕಿಚ್ಚ ಸುದೀಪ್ ಕೂಡಾ ತಮ್ಮ ಪ್ರೀತಿಯ ಅಂಬಿ ಮಾಮನ ಮಗನಿಗೆ ಶುಭ ಹಾರೈಸಿದ್ದಾರೆ. ನಿನಗೆ ಸಿನಿಮಾ ಹೊಸದಲ್ಲದಾಗಿರ. ಆದರೆ ಮೊದಲ ಹೆಜ್ಜೆ ಎನ್ನುವುದು ಎಲ್ಲರಿಗೂ ವಿಶೇಷವಾಗಿರುತ್ತದೆ. ನನಗೆ ಗೊತ್ತು ಆ ಮಹಾನ್ ಚೇತನ ಮೇಲಿನಿಂದ ನಿನಗೆ ಹಾರೈಸುತ್ತಿರುತ್ತದೆ. ಇನ್ನೂ ಎತ್ತರಕ್ಕೆ ಬೆಳಿ. ನಿನಗೆ ನನ್ನ ಶುಭ ಹಾರೈಕೆಗಳು' ಎಂದು ಕಿಚ್ಚ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ… ಅಮರ್ ಸಿನಿಮಾವನ್ನು ಅಭಿಮಾನಿಗಳು ಮೆಚ್ಚಿಕೊಳ್ತಾರ.. ಅಭಿ ಸ್ಯಾಂಡಲ್ ವುಡ್ ನ ಭರವಸೆಯ ನಾಯಕನಾಗುತ್ತಾನ ಎಂಬುದನ್ನು ಕಾದು ನೋಡಬೇಕಿದೆ… ಅಮ್ಮನ ಗೆಲುವಿನ ಖುಷಿಯಲ್ಲಿರುವ ಅಭಿಗೆ ಅಭಿಮಾನಿಗಳು ಮತ್ತೊಂದು ಉಡುಗೊರೆ ಕೊಡುತ್ತಾರ ಎಂಬುದನ್ನು ಕಾದು ನೋಡಬೇಕಿದೆ.
Comments