ಈ ವಾರದ ವೀಕೆಂಡ್ ವಿತ್ ರಮೇಶ್ ಷೋ ನೋಡಲು ಕಾಯುತ್ತಿರುವ ಸ್ಯಾಂಡಲ್ ವುಡ್'ನ ಸ್ಟಾರ್ ನಟಿ..!!

ಕಿರುತೆರೆಯ ಜನಪ್ರಿಯ ಷೋಗಳಲ್ಲಿ ವೀಕೆಂಡ್ ವಿಥ್ ರಮೇಶ್ ಸಾಕಷ್ಟು ಹೆಸರನ್ನು ಮಾಡಿದೆ… ತನ್ನದೇ ಆದ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದೆ.. ಈಗಾಗಲೇ ಮೂರು ಸೀಜನ್ ಗಳನ್ನು ಮುಗಿಸಿದೆ.. ಇದೀಗ ನಾಲ್ಕನೇ ಸೀಜನ್ ನಡೆಯುತ್ತದೆ.. ಆದರೆ ಅಭಿಮಾನಿಗಳು ನಾಲ್ಕನೇ ಸೀಜನ್ ಅನ್ನು ಹೊಗಳಿದ್ದಕ್ಕಿಂತ ತೆಗಳಿದ್ದೆ ಜಾಸ್ತಿಯಾಗಿತು..ಮೊದಲ ಸಂಚಿಕೆಯಲ್ಲಿ ಡಾ.ವೀರೇಂದ್ರ ಹೆಗ್ಗಡೆಯವರು ಬಂದಿದ್ದು ಬಿಟ್ಟರೆ ಬೇರೆಲ್ಲಾ ಎಪಿಸೋಡ್ ಗಳ ಬಗ್ಗೆ ನೆಗೆಟಿವ್ ಕಮೆಂಟ್ ಗಳೇ ಬಂದವು..ಇದೀಗ ಮುಂದಿನ ವಾರದ ಸಂಚಿಕೆಯ ಬಗ್ಗೆ ಸಾಕಷ್ಟು ಪಾಸಿಟಿವ್ ಮಾತುಗಳು ಬಂದಿವೆ.. ಯಾಕಂದ್ರೆ ಇಷ್ಟು ದಿನ ಕಾಯುತ್ತಿದ್ದಂತಹ ಸಂಚಿಕೆ ಈ ವಾರ ಪ್ರಸಾರವಾಗುತ್ತಿದೆ.
ಎಸ್.. ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಾದ ನಾರಾಯಣ ಮೂರ್ತಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬಂದಿದ್ದಾರೆ. ಈಗಾಗಲೇ ಕಾರ್ಯಕ್ರಮದ ಪ್ರೊಮೋ ಹೊರಬಂದಿದ್ದು ಆ ಸಂಚಿಕೆ ಇದೇ ಶನಿವಾರ ಪ್ರಸಾರವಾಗಲಿದೆ.. ಸಾಮಾನ್ಯ ವೀಕ್ಷಕರು ಮಾತ್ರವಲ್ಲದೆ ನಟಿ ರಚಿತಾ ರಾಮ್ ಕೂಡ ಈ ಸಂಚಿಕೆಯನ್ನು ನೋಡಲು ಕಾಯುತ್ತಿದ್ದಾರೆ. ನಾರಾಯಣ ಮೂರ್ತಿ ಸಂಚಿಕೆ ಬಗ್ಗೆ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ರಚಿತಾ ಸಂತಸ ಹಂಚಿಕೊಂಡಿದ್ದಾರೆ.
''ವಿಪ್ರೋ ಕಂಪನಿ ನನ್ನ ರಿಜೆಕ್ಟ್ ಮಾಡಿದ್ರು. ಅವರು ಅವತ್ತು ರಿಜೆಕ್ಟ್ ಮಾಡಿಲ್ಲ ಅಂದಿದ್ರೆ, ಇನ್ಫೋಸಿಸ್ ಶುರು ಆಗ್ತಿರಲಿಲ್ಲ.''ಎಂದು ಪ್ರೋಮೋದಲ್ಲಿ ಹೇಳಿದ ನಾರಾಯಣ ಮೂರ್ತಿ ರವರ ಮಾತುಗಳು ಈಗಾಗಲೇ ಸಾಕಷ್ಟು ಜನರಿಗೆ ಕುತೂಹಲ ಮೂಡಿಸಿದೆ. ನಾರಾಯಣ ಮೂರ್ತಿ ಅವರ ಸಂಚಿಕೆ ಈ ಶನಿವಾರ ಹಾಗೂ ಸುಧಾಮೂರ್ತಿ ಅವರ ಸಂಚಿಕೆ ಈ ಭಾನುವಾರ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ. ಅಭಿಮಾನಿಗಳು ಕೂಡ ಈ ಸಂಚಿಕೆಯನ್ನ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.
Comments