ಡಿ ಬಾಸ್ ಮುಂದೆ ವಿಲನ್ ಆಗಿ ತೊಡೆ ತಟ್ಟಲಿದ್ದಾರೆ ಮರಿ ಟೈಗರ್  ಪ್ರಭಾಕರ್..!!

30 May 2019 5:07 PM | Entertainment
513 Report

ಸ್ಯಾಂಡಲ್’ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮುಂದಿನ ಸಿನಿಮಾ ರಾಬರ್ಟ್ ಸಿನಿಮಾವು ತುಂಬಾ ಕ್ಯೂರಾಸಿಟಿಯನ್ನು ಕ್ರಿಯೆಟ್ ಮಾಡಿದೆ…ಇದೀಗ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಮತ್ತು ‘ಮರಿ ಟೈಗರ್’ ವಿನೋದ್​ ಪ್ರಭಾಕರ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ… ಇವರಿಬ್ಬರು ಗೆಳೆಯರು ಅನ್ನೋದು ಎಲ್ಲರಿಗೂ ಕೂಡ ಗೊತ್ತಿರುವ ವಿಷಯವೇ.. ಇವರಿಬ್ಬರ ಕಾಂಬೀನೇಷನ್ ನಲ್ಲಿ ಮೂಡಿ ಬಂದ ನವಗ್ರಹ ಸಿನಿಮಾ ಸಖತ್ ವರ್ಕೌಟ್ ಆಗಿತ್ತು.. ಇದೀಗ ಮತ್ತೆ ಈ ಜೋಡಿ ಒಂದಾಗುತ್ತಿದ್ದಾರೆ.

ಈಗಾಗಲೇ ನಾಯಕನಾಗಿ ಮಿಂಚಿದ್ದ ವಿನೋದ್​ ಇದೀಗ ಡಿಬಾಸ್ ಎದುರು ವಿಲನ್​ ಆಗೋಕೆ ರೆಡಿಯಾಗ್ತಿದ್ದಾರೆ. ದರ್ಶನ್ ಮತ್ತು ತರುಣ್ ಸುದೀರ್ ಕಾಂಬಿನೇಷನ್​ನಲ್ಲಿ ಬರುತ್ತಿರುವ ‘ರಾಬರ್ಟ್’ ಸಿನಿಮಾ ಸೆಟ್ಟೇರಿ ಬರೀ ಪೋಸ್ಟರ್​ನಿಂದಲೇ ಸಿಕ್ಕಾಪಟ್ಟೇ ಸದ್ದು ಮಾಡಿತ್ತು. ಈಗಾಗಲೇ ಚಿತ್ರಕ್ಕೆ ವಿಲನ್ ಆಗಿ ಟಾಲಿವುಡ್ ಸ್ಟಾರ್ ಜಗಪತಿಬಾಬು ಎಂಟ್ರಿ ಕೊಟ್ಟಿದ್ದಾರೆ. ಇದೀಗ ಮರಿಟೈಗರ್ ವಿನೋದ್ ಕೂಡ ನೆಗೆಟಿವ್ ಶೇಡ್​ನಲ್ಲಿ ಕಾಣಿಸಿಕೊಳ್ತಿದ್ದು ರಾಬರ್ಟ್ ಅಡ್ಡಾಗೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ದರ್ಶನ್ ಎದುರಾಗಿ ವಿನೋದ್ ತೊಡೆ ತಟ್ಟಲಿದ್ದಾರಂತೆ. ಇದೊಂದು ಪಕ್ಕಾ ಮಾಸ್ ಎಂಟಟೈನ್ ಸಿನಿಮಾವಾಗಿದ್ದು ಹತ್ತು ಹಲವು ಗೆಟಪ್​ನಲ್ಲಿ ದರ್ಶನ್ ಮಿಂಚಲಿದ್ದಾರೆ. ಚಿತ್ರದ ವಿಶೇಷತೆಗಳನ್ನು ಚಿತ್ರತಂಡ ಬಿಟ್ಟುಕೊಂಡಿಲ್ಲ… ರಾಬರ್ಟ್ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ…

Edited By

Manjula M

Reported By

Manjula M

Comments