ಚಂದನವನಕ್ಕೆ ಎಂಟ್ರಿ ಕೊಟ್ಟ ಕಣ್ಸನ್ನೆ ಹುಡುಗಿ..! ಹೀರೋ ಯಾರ್ ಗೊತ್ತಾ..?
ಸ್ಯಾಂಡಲ್ ವುಡ್ ಗೆ ಆಗಿಂದಾಗೆ ವಿಭಿನ್ನ ಕಥಾ ಹಂದರವುಳ್ಳ ಸಿನಿಮಾಗಳು ಬರುತ್ತಲೆ ಇರುತ್ತವೆ. ಪರಭಾಷೆಯ ನಾಯಕಿರು ಕನ್ನಡಕ್ಕೆ ಬಂದು ನೆಲೆಕಂಡುಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ.. ಆದರೂ ಕುಡ ಸುಮಾರು ನಾಯಕಿರು ಇಲ್ಲಿ ನೆಲೆ ಕಂಡುಕೊಂಡಿದ್ದಾರೆ.. ಇದೀಗ ಕೇರಳದ ಬ್ಯೂಟಿ, ಕಣ್ಸನ್ನೆಯ ಹುಡುಗಿ ಪ್ರಿಯಾ ವಾರಿಯರ್ ಕೂಡ ಕನ್ನಡಕ್ಕೆ ಎಂಟ್ರಿ ಕೊಡಲಿದ್ದಾರೆ.. ಈವರೆಗೆ ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿದ್ದಂತಹ ರಘು ಕೋವಿ ಅವರು ಆಕ್ಷನ್ ಕಟ್ ಹೇಳಲು ಸಿದ್ದವಾಗಿದ್ದಾರೆ.. ಇವರ ಮೊದಲ ನಿರ್ದೇಶನದ ಚಿತ್ರಕ್ಕೆ ಕೇರಳ ಬ್ಯೂಟಿ ಪ್ರಿಯಾ ಪ್ರಕಾಶ್ ವಾರಿಯರ್ ಬರುತ್ತಿರುವುದು ಕನ್ಫರ್ಮ್ ಆಗಿದೆ..
ಈಗಾಗಲೇ ಕೇರಳಕ್ಕೆ ಹೋಗಿ ಪ್ರಿಯಾ ವಾರಿಯರ್‌ಗೆ ಕತೆ ಹೇಳಿ ಬಂದಿರುವ ರಘು ಕೋವಿಯವರು, ಕಣ್ಸನ್ನೆ ಹುಡುಗಿಯನ್ನು ಕನ್ನಡಕ್ಕೆ ತರುವಲ್ಲಿ ಸಫಲರಾಗಿದ್ದಾರೆ. ಈ ಚಿತ್ರಕ್ಕೆ ಕುಮಾರ್ ಬಂಗಾರಪ್ಪ ಪುತ್ರ ಅಥವಾ ಕ್ರೇಜಿಸ್ಟಾರ್ ರವಿಚಂದ್ರನ್ ಎರಡನೇ ಮಗ ವಿಕ್ಕಿ ನಾಯಕರಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.ಆದರೆ, ನಿರ್ದೇಶಕರು ಮಾತ್ರ ಇನ್ನೂ ಯಾರನ್ನೂ ಪಕ್ಕಾ ಮಾಡಿಕೊಂಡಿಲ್ಲ. ಒಂದು ವೇಳೆ ಅಂದುಕೊಂಡಂತೆ ಆದರೆ ಕುಮಾರ್ ಬಂಗಾರಪ್ಪ ಪುತ್ರ ರಘು ಕೋವಿ ಚಿತ್ರದ ಮೂಲಕ ಕನ್ನಡಕ್ಕೆ ಚಿತ್ರರಂಗಕ್ಕೆ ಬರಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಬಿ ಎಸ್ ಸುಧೀಂದ್ರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ನೈಜ ಕತೆಯ ಆಧಾರಿತ ಪ್ರೇಮ ಸಿನಿಮಾ. ಕನ್ನಡದಲ್ಲಿ ಇದುವರೆಗೂ ಇಂಥ ಪ್ರೇಮ ಕತೆ ಬಂದಿಲ್ಲ. ಈ ಕಾರಣಕ್ಕೆ ಹೆಸರಿನಿಂದ ಹಿಡಿದು ಎಲ್ಲವನ್ನೂ ಭಿನ್ನವಾಗಿಯೇ ಇಡುವುದಕ್ಕೆ ಹೊರಟಿದೆ ಚಿತ್ರತಂಡ..ಅರ್ಜುನ್ ಜನ್ಯಾ ಸಂಗೀತ, ಸತ್ಯ ಹೆಗಡೆ ಕ್ಯಾಮೆರಾ ಈ ಸಿನಿಮಾಕ್ಕಿದೆ. ಸದ್ಯ ನಾಯಕಿಯಷ್ಟೆ ಪೈನಲ್ ಆಗಿದ್ದು ನಾಞಯಕ ಯಾರು ಎಂಬುದನ್ನು ಚಿತ್ರತಂಡ ಪೈನಲ್ ಮಾಡಿಲ್ಲ…
Comments