ಕ್ರೇಜಿಸ್ಟಾರ್ ಮಗಳ ಮದುವೆ ಸಾಕ್ಷಿಯಾದ ಸ್ಟಾರ್ಸ್

29 May 2019 5:12 PM | Entertainment
400 Report

ಸ್ಯಾಂಡಲ್ ವುಡ್ ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಂದರೆ ಒಂಥರಾ ಕ್ರೇಜ್.. ಅವರ ಸಿನಿಮಾಗಳು ಅಂದರೆ ಅಭಿಮಾನಿಗಳಿಗೆ ಮತ್ತಷ್ಟು ಕ್ರೇಜ್… ಇಂದು ಕ್ರೇಜಿಸ್ಟಾರ್ ಮಗಳು ಗೀತಾಂಜಲಿ ಮದುವೆ ಅದ್ದೂರಿಯಾಗಿ ಉದ್ಯಮಿ ಅಜಯ್ ಜೊತೆ  ನಡೆಯಿತು.. ಗೀತಾಂಜಲಿ ಮತ್ತು ಅಜಯ್ ಅವರ ಮದುವೆ ಕಾರ್ಯಕ್ರಮವು ಬೆಂಗಳೂರಿನ ಅರಮನೆ ಮೈದಾನದಲ್ಲಿ ವೈಟ್ ಪೆಟಲ್ಸ್ ಆವರಣದಲ್ಲಿ ನಿರ್ಮಿಸಲಾಗಿದ್ದ ಗಾಜಿನ ರಾಜಹಂಸದ ವೇದಿಕೆ ಯಲ್ಲಿ ನಡೆದಿದೆ.

ಕುಟುಂಬದವರು ಬಂಧು ಬಳಗದ ಮಧ್ಯೆ ಅಜಯ್ ಗೀತಾಂಜಲಿ ಅವರಿಗೆ ತಾಳಿ ಕಟ್ಟಿ ಸಪ್ತಪದಿ ತುಳಿದಿದ್ದಾರೆ ಮಂಗಳವಾರ ಈ ಜೋಡಿಯ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಬಂದು ನವಜೋಡಿಗೆ ಶುಭ ಹಾರೈಸಿದ್ದರು. ಇನ್ನೂ ಕ್ರೇಜಿ ಸ್ಟಾರ್ ಮಗಳ ಮದುವೆಗೆ ಸೂಪರ್ ಸ್ಟಾರ್ ರಜಿನಿಕಾಂತ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ,  ಸುದೀಪ್ ದಂಪತಿ, ನಿರ್ದೇಶಕ ಪ್ರೇಮ್ ದಂಪತಿ, ರಾಕ್‍ಲೈನ್ ವೆಂಕಟೇಶ್, ಸುಮಲತಾ, ಸುಧಾರಾಣಿ ಸೇರಿದಂತೆ ಇನ್ನೂ ಅನೇಕ ನಟ-ನಟಿಯರು ಮದುವೆಯಲ್ಲಿ ಪಾಲ್ಗೊಂಡಿದ್ದರು.. ಇನ್ನೂ ಮಗಳ ಮದುವೆಯ ಸಂದರ್ಭದಲ್ಲಿ ಕ್ರೇಜಿ ಸ್ಟಾರ್ ಕೂಡ ಸಂಭ್ರಮಿಸಿದರು..

Edited By

Manjula M

Reported By

Manjula M

Comments