ರಿಲೀಸ್‌ಗೂ ಮುನ್ನ ಸದ್ದು ಮಾಡಿದ ‘ಅಮರ್’ ಸಿನಿಮಾ..!!

ಸ್ಯಾಂಡಲ್ ವುಡ್ನ ಬಹು ನಿರೀಕ್ಷಿತವಾದ ಅಮರ್ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ..ರೆಬಲ್ ಸ್ಟಾರ್ ಅಂಬಿ ಮಗ ಅಭಿಷೇಕ್ ಮೊದಲ ಬಾರಿಗೆ ಸಿನಿಮಾದ ನಾಯಕನಟನಾಗಿ ಅಭಿನಯಿಸಿದ್ದಾರೆ. ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಮರ್ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಕುತೂಹಲ ಮೂಡಿಸಿದೆ. ಸಿನಿಮಾದ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡಿದ್ದು. ‘ಅಮರ್’ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುವುದಂತೂ ಸುಳ್ಳಲ್ಲ..
ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಅಭಿಮಾನಿಗಳ ಬಳಗ ದೊಡ್ಡದೆ ಇತ್ತು. ಇದೀಗ ದಾವಣಗೆರೆ ಮೂಲದ ಮಂಜುನಾಥ್ ಅಂಬರೀಶ್ ಅವರ ಕಟ್ಟಾ ಅಭಿಮಾನಿ. ಅಮರ್ ಚಿತ್ರದ ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾತರರಾಗಿದ್ದಾರೆ.ಚಿತ್ರದ ಮೊದಲ ಟಿಕೆಟ್ ತಾವೇ ಖರೀದಿಸಬೇಕೆಂದು ರಿಲೀಸ್ ಗೂ ಮುನ್ನ ಖರೀದಿಸಿದ್ದಾರೆ. ನಿರ್ಮಾಪಕ ಸಂದೇಶ್ ನಾಗರಾಜ್ ಅವರಿಗೆ ಮಂಜುನಾಥ್ 1 ಲಕ್ಷ ರೂಪಾಯಿ ಚೆಕ್ ಅನ್ನು ನೀಡಿದ್ದಾರೆ. ಅಭಿ ಅಭಿನಯದ ಅಮರ್ ಸಿನಿಮಾ ಮೇ 31 ಕ್ಕೆ ಬಿಡುಗಡೆಯಾಗಲಿದ್ದು ಅಭಿಷೇಕ್ ಅಂಬರೀಶ್ ಹಾಗೂ ತಾನ್ಯಾ ಹೋಪ್ ಸ್ಕ್ರೀನ್ ಷೇರ್ ಮಾಡಿದ್ದಾರೆ. ನಾಗಶೇಖರ್ ನಿರ್ದೇಶನ ಮಾಡಿದ್ದು ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈಗಾಗಲೆ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿದ್ದು ಸಿನಿಮಾ ಸಿನಿ ಪ್ರಿಯರಿಗೆ ಯಾವ ರೀತಿ ಇಷ್ಟವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Comments