ಅಜಯ್ ರಾವ್ ಮಗಳ ಫೋಟೋ ವೈರಲ್..!! ಹೇಗಿದ್ದಾರೆ ಸ್ಯಾಂಡಲ್’ವುಡ್ ಕೃಷ್ಣನ ಮಗಳು..!!!

ಸ್ಯಾಂಡಲ್ ವುಡ್ ನಲ್ಲಿ ಕೃಷ್ಣ ಅಂತಾನೇ ಫೇಮಸ್ ಆಗಿರುವ ಅಜಯ್ ರಾವ್ ಒಂದಷ್ಟು ಹಿಟ್ ಸಿನಿಮಾಗಳನ್ನು ಕನ್ನಡ ಇಂಡಸ್ಟ್ರಿಗೆ ಕೊಟ್ಟರು…ಇದೀಗ ಅಜಯ್ ರಾವ್ ತಮ್ಮ ಪತ್ನಿಯ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಮಗಳ ಫೋಟೋವನ್ನು ರಿವೀಲ್ ಮಾಡಿದ್ದಾರೆ. ನೆನ್ನೆಯಷ್ಟೆ ಅಜಯ್ ಅವರ ಪತ್ನಿ ಸ್ವಪ್ನಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹಾಗಾಗಿ ನಟ ಅಜಯ್ ತಮ್ಮ ಫೇಸ್‍ಬುಕ್‍ನಲ್ಲಿ ಪತ್ನಿಗೆ ಶುಭಾಶಯ ತಿಳಿಸಿದ್ದಾರೆ.. ಅಷ್ಟೆ ಅಲ್ಲದೆ ಪತ್ನಿ ಜೊತೆ ಇರುವ ಮಗಳ ಫೋಟೋವನ್ನು ಕೂಡ ಷೇರ್ ಮಾಡಿದ್ದಾರೆ…
ಅಜಯ್ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಹಾಕಿ ಅದಕ್ಕೆ, ಹುಟ್ಟುಹಬ್ಬದ ಶುಭಾಶಯಗಳು ಸ್ವಪ್ನಾ ಮುಂಬರುವ ವರ್ಷದಲ್ಲಿ ನಿನಗೆ ಖುಷಿ ಸಿಗಲಿ. ಈ ದಿನದಂದು ನಾನು ನನ್ನ ಮಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸುತ್ತಿದ್ದೇನೆ. ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಅಜಯ್ ಮಗಳ ಫೋಟೋ ನೋಡಿ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಜಯ್ ಅವರ ಪತ್ನಿ ಸ್ವಪ್ನಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಕಮೆಂಟ್ ಮಾಡಿದ್ದಾರೆ. ಅಜಯ್ ಡಿ. 2ರಂದು ತಮ್ಮ ಮುದ್ದಾದ ಹೆಣ್ಣು ಮಗುವಿಗೆ `ಚೆರಿಷ್ಮಾ’ ಎಂದು ನಾಮಕರಣ ಮಾಡಿದ್ದರು..ಅಜಯ್ ರಾವ್ ತಮ್ಮ ಮಗಳ ಪೋಟೋ ಹಾಕಿದ್ದಾರೆ… ಪೋಟೋ’ಗೆ ಅಭಿಮಾನಿಗಳ ಸಿಕ್ಕಾಪಟ್ಟೆ ಲೈಕ್ ಕೊಟ್ಟಿದ್ದಾರೆ.
Comments